ಬಂದೂಕು ತೋರಿಸಿ ತಂಡದಿಂದ ಯುವಕನಿಗೆ ಹಲ್ಲೆ

attack 1
Published on

ಕಾಸರಗೋಡು: ಯುವಕನಿಗೆ ತಂಡವೊಂದು ಬಂದೂಕು ತೋರಿಸಿ, ನಂತರ ಹಲ್ಲೆ ನಡೆಸಿರುವ ಬಗ್ಗೆ ಮೇಲ್ಪರಂಬ ಠಾಣೆ ಪೊಲೀಸರು ನಾಲ್ಕು ಮಂದಿಯ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.

ಕೀಯೂರು ಭಗವತೀ ಕ್ಷೇತ್ರ ಸನಿಹದ ನಿವಾಸಿ ಇಸ್ಮಾಯಿಲ್ ಎಂಬುವರ ದೂರಿನ ಮೇರೆಗೆ ಕುಞಹಮ್ಮದ್, ಮೆಹ್‌ರೂಫ್, ಶಫೀಕ್ ಮತ್ತುಶಹಾದ್ ಆಫ್ರಿದ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ವಿದೇಶದಲ್ಲಿ ನಡೆದಿರುವ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ ಹಲ್ಲೆ ನಡೆದಿತ್ತೆನ್ನಲಾಗಿದೆ. ಮೇಲ್ಪರಂಬ ಬಸ್ ನಿಲ್ದಾಣ ಸಮೀಪ ನಾಲ್ಕು ಮಂದಿಯ ತಂಡ ಬೆದರಿಸಿದ್ದು, ಅವರಲ್ಲಿ ಒಬ್ಬಾತ ಬಂದೂಕು ತೋರಿಸಿ ಕೊಲೆಗೈಯುವ ಬೆದರಿಕೆಯೊಡ್ಡಿರುವುದಲ್ಲದೆ, ನಂತರ ಕಬ್ಬಿಣದ ಸಲಾಕೆಯಿಂದ ತಲೆಗೆ ಬಡಿದಿದ್ದಾರೆ. ಇದನ್ನು ತಡೆಯಲೆತ್ನಿಸಿದ ಸ್ನೇಹಿತ ಶಾನವಾಸ್ ಎಂಬಾತನ ಮೇಲೂ ತಂಡ ಹಲ್ಲೆ ನಡೆಸಿದೆ ಎಂದು ದೂರು ತಿಳಿಸಿದೆ. ಗಾಯಾಳು ಇಸ್ಮಾಯಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net