ಪಕ್ಷಿಗಳ ಜಲದಾಹ ನೀಗಿಸುವ ಯುವಕ

ಮಲ್ಲದಗುಡ್ಡ ಗ್ರಾಮದ ತಿಮ್ಮಪ್ಪ ಗುಡ್ಡದಲ್ಲಿ ಮಲ್ಲಪ್ಪ ನಾಯಕ ಅವರು ಪಕ್ಷಿಗಳಿಗಾಗಿ ನೀರು ಹಾಕುತ್ತಿರುವುದು.
ಮಲ್ಲದಗುಡ್ಡ ಗ್ರಾಮದ ತಿಮ್ಮಪ್ಪ ಗುಡ್ಡದಲ್ಲಿ ಮಲ್ಲಪ್ಪ ನಾಯಕ ಅವರು ಪಕ್ಷಿಗಳಿಗಾಗಿ ನೀರು ಹಾಕುತ್ತಿರುವುದು.
Published on

ಕವಿತಾಳ: ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ಪ್ರತಿ ದಿನ ಬೆಟ್ಟ ಹತ್ತಿ ನೀರಿನ ವ್ಯವಸ್ಥೆ ಮಾಡುವ ಮೂಲಕ ಮಲ್ಲದಗುಡ್ಡ ಗ್ರಾಮದ ಯಲ್ಲಪ್ಪ ನಾಯಕ ಜವಳಗೇರಾ ಮಾನವೀಯತೆ ಮೆರೆಯುತ್ತಿದ್ದಾರೆ.

ಮಲ್ಲದಗುಡ್ಡ ಗ್ರಾಮದ ತಿಮ್ಮಪ್ಪ ಗುಡ್ಡದಲ್ಲಿ ವಿವಿಧ ಜಾತಿಯ ಪಕ್ಷಿಗಳು ಆಗಾಗ ಬಂದು ಹೋಗುತ್ತವೆ. ಈಗ ಬೇಸಿಗೆ ಕಾರಣ ನೀರು ಸಿಗದೆ ಪಕ್ಷಿಗಳು ಪರಿತಪಿಸುತ್ತಿವೆ. ಇದನ್ನು ಕಂಡ ಯಲ್ಲಪ್ಪ ಅವರು ಪ್ರತಿದಿನ ಎರಡು ಕೊಡ ನೀರನ್ನು ಗುಡ್ಡದ ಮೇಲೆ ಹೊತೊಯ್ದು ಕಲ್ಲು ಬಂಡೆಗಳ ತಗ್ಗುಗಳಲ್ಲಿ ಹಾಕುತ್ತಾರೆ. ಕಳೆದ ಎರಡು ತಿಂಗಳಿನಿಂದ ನೀರಿನ ವ್ಯವಸ್ಥೆ ಮಾಡುತ್ತಿರುವ ಯಲ್ಲಪ್ಪ, ಪಕ್ಷಿಗಳು ನೀರು ಕುಡಿಯುವುದನ್ನು ನೋಡಿ ಖುಷಿಪಡುತ್ತಾರೆ.

ಎರಡು ತಿಂಗಳ ಹಿಂದೆ ಗ್ರಾಮದ ಪಕ್ಕದ ತಿಮ್ಮಪ್ಪನ ಗುಡ್ಡ ಹತ್ತಿದಾಗ ಮಧ್ನಾಹ್ನದ ಬಿಸಿಲಿನಲ್ಲಿ ಪಕ್ಷಿಗಳು ಕುಡಿವ ನೀರಿಗಾಗಿ ಹಾತೊರೆಯುವುದನ್ನು ಕಂಡು ಅಂದಿನಿಂದ ಗುಡ್ಡದ ಕಲ್ಲುಗಳ ತಗ್ಗಿನಲ್ಲಿ ನೀರು ಹಾಕಿ ಬರುತ್ತೇನೆ. ನೀರು ಕುಡಿಯಲು ಗುಬ್ಬಚ್ಚಿ, ಮೈನಾ, ನವಿಲು, ಗಿಳಿ, ಕೊರವಂಜಿ ಸೇರಿ ವಿವಿಧ ಪಕ್ಷಿಗಳು ಬರುತ್ತವೆ. ಮನುಷ್ಯರು ಸಮೀಪ ಹೋದಾಗ ಹಾರಿ ಹೋಗುತ್ತವೆ. ಪಕ್ಷಿಗಳು ನೀರು ಕುಡಿಯುವುನ್ನು ಮರೆಯಲ್ಲಿ ನಿಂತು ನೋಡಬಹುದು ಎನ್ನುತ್ತಾರೆ ಯಲ್ಲಪ್ಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net