ಫೋನ್ ಆಸೆಗೆ ಬಿದ್ದು 19.58 ಲಕ್ಷ ರೂ. ಕಳೆದುಕೊಂಡ ಯುವಕ

cybe crime
Published on

ಹುಬ್ಬಳ್ಳಿ: ಕಡಿಮೆ ಹಣಕ್ಕೆ ಹಳೆಯ ಫೋನ್ ಖರೀದಿ ಮಾಡಲು ಹೊರಟಿದ್ದೀರಾ? ಹಾಗಾದರೆ, ಸೈಬರ್ ಕಳ್ಳರಿಂದ ಎಚ್ಚರವಹಿಸಿಯೇ ಖರೀದಿಸಬೇಕು. ಇಲ್ಲವಾದರೆ, ಫೋನ್‌ಗಿಂತ ನಿಮ್ಮ ಖಾತೆಯಲ್ಲಿರುವ ಹಣವನ್ನೆಲ್ಲ ಕಳೆದುಕೊಳ್ಳಬೇಕದೀತು ಹುಷಾರ್ !

ಇಂಥ ಪ್ರಕರಣದ ಬಲೆಗೆ ಹುಬ್ಬಳ್ಳಿಯ ಯುವಕ ಮೋಹನ ಎಸ್. ಎಂಬಾತ ಸಿಕ್ಕಿಹಾಕಿಕೊಂಡು 19.58 ಲಕ್ಷ ರೂ. ಕಳೆದುಕೊಂಡಿದ್ದಾನೆ.

ಫೇಸ್‌ಬುಕ್ ಪೇಜ್‌ನಲ್ಲಿ ಹಾಕಿದ್ದ ಹಳೆಯ ಸ್ಮಾರ್ಟ್ ಫೋನ್ ಖರೀದಿಗೆ ಈ ಯುವಕ ಬೆನ್ನು ಹತ್ತಿದ್ದಾನೆ. ಈತನ ಆಸಕ್ತಿ ಗ್ರಹಿಸಿದ ದೆಹಲಿ ಮೂಲದ ಜೆಜೆ ಕಮ್ಯೂನಿಕೇಷನ್‌ನ ಮನೀಶ ಜೈನ್ ಮೊಬೈಲ್ ಶಾಪ್ ಹೆಸರಿನ ವಂಚಕರು, ಗಾಳ ಹಾಕಿದ್ದಾರೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ 23 ಆಲ್ಟಾ 12, 256 ಜಿಬಿ ಮೊಬೈಲ್ ಫೋನ್ 18,500 ರೂ.ಗೆ ಮಾರುವುದಾಗಿ ಹೇಳಿದ್ದಾರೆ. ಖರೀದಿ ಪ್ರಕ್ರಿಯೆಗೆ ಒಪ್ಪಿಗೆ ಪಡೆದಾಕ್ಷಣ, ಫೋನ್ ಆನ್‌ಲೈನ್ ಡೆಲಿವರಿ ಮಾಡಲು 11100 ರೂ. ಹಾಕಿಸಿಕೊಂಡಿದ್ದಾರೆ. ಉಳಿದ ಹಣಕ್ಕೆ ಕ್ಯೂ ಆರ್ ಕೋಡ್ ಕೇಳಿಕೊಂಡು ವಿವಿಧ ಮಾಹಿತಿ ಪಡೆದ ವಂಚಕರು, ಮೋಹನ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ 19,58,324 ರೂ. ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net