ಬಸ್ ಮಗುಚಿ ಸಕಲೇಶಪುರದ ಯುವಕ ಸಾವು

1712487316209
ರೋನೇಕ್ ಸಿಂಗ್
Published on

ಸಕಲೇಶಪುರ: ಚಿತ್ರದುರ್ಗ ತಾಲೂಕಿನ ಹೊಳಲ್ಕೆರೆ ತಾಲೂಕಿನ ಹನುಮಂತ ದೇವರ ಕಣಿವೆ ಪ್ರದೇಶದ ಆಂಜನೇಯಸ್ವಾಮಿ ದೇವಸ್ಥಾನ ಸಮೀಪ ಶನಿವಾರ ರಾತ್ರಿ ಸಂಭವಿಸಿದ ಖಾಸಗಿ ಬಸ್ ಮಗುಚಿದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಪಟ್ಟಣದ ಯುವಕನೊಬ್ಬ ಮೃತಪಟ್ಟಿದ್ದಾನೆ.

ಅಶೋಕ ರಸ್ತೆಯ ಅಂಬಾ ಡ್ರೈ ಫ್ರೂಟ್ ಅಂಗಡಿಯ ಮಾಲೀಕ ನರೇಂದ್ರ ಸಿಂಗ್ ಅವರ ಪುತ್ರ ರೊನೇಕ್ ಸಿಂಗ್ (23) ಮೃತ ಯುವಕ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಡ್ರೋನ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಈತ ಕಾರ್ಯನಿಮಿತ್ತ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಎನ್ನಲಾಗಿದೆ. ಮೃತನ ಬಳಿ ಇದ್ದ ದಾಖಲಾತಿಗಳನ್ನು ಆಧರಿಸಿ ಹೊಳಲ್ಕೆರೆ ಪೋಲಿಸರು ಪಾಲಕರು ವಿಷಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net