ರೈಲಿಗೇರಲು ಯತ್ನಿಸಿದ ಯುವಕ ಬಿದ್ದು ಗಂಭೀರ

Published on

ಕಾಸರಗೋಡು: ಚಲಿಸುತ್ತಿದ್ದ ರೈಲಿಗೆ ಏರಲು ಯತ್ನಿಸಿದ ಯುವಕ ಬಿದ್ದು ಕಾಲು, ಭುಜಕ್ಕೆ ಗಂಭೀರ ಗಾಯಗೊಂಡಿದ್ದಾರೆ. ಪಾಲಕ್ಕಾಡ್ ಮುಳಿಯಂಕಾವು ನಿವಾಸಿ ಸುಂದರ (39) ಗಾಯಾಳು. ಅವರನ್ನು ಕಾಞಂಗಾಡಿನ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಕೋಯಿಕ್ಕೋಡಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಮಂಗಳೂರಿನಿಂದ ತಿರುವನಂತಪುರ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅವರು ಕಾಞಂಗಾಡಿನಲ್ಲಿ ರೈಲು ನಿಲ್ಲುತ್ತಿದ್ದಂತೆ ಆಹಾರ ಖರೀದಿಗಾಗಿ ಇಳಿದಿದ್ದರು. ರೈಲು ಸಂಚರಿಸಲಾರಂಭಿಸುತ್ತಿದ್ದಂತೆ ಏರಲು ಯತ್ನಿಸಿದಾಗ ಬಿದ್ದು ರೈಲು, ಫ್ಲಾೃಟ್‌ಫಾರ್ಮ್‌ನ ಸಂದಿಯಲ್ಲಿ ಸಿಲುಕಿಕೊಂಡಿದ್ದರು. ಇದರಿಂದ ಕಾಲಿಗೆ ಗಂಭೀರ ಗಾಯವಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net