

ಮಂಡ್ಯ: (Ganesh immersion ) ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಯುವಕ ಸಾವನ್ನೊಪ್ಪಿದ್ದಾನೆ. ಈ ಘಟನೆ ಮಂಡ್ಯ ತಾಲ್ಲೂಕಿನ ಬೇಲೂರು ಗ್ರಾಮದ ಕೆರೆಯಲ್ಲಿ ಘಟನೆ.
ಪ್ರದೀಪ್( 28) ಮೃತ ಯುವಕ. ಈತ ಯರಹಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ. ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.
ರಾತ್ರಿ ಬೇಲೂರು ಕೆರೆಯಲ್ಲಿ ಯುವಕರು ಗಣೇಶ ವಿಸರ್ಜನೆ ಮಾಡುತ್ತಿದ್ದರು. ಈ ವೇಳೆ ಯುವಕರ ಜೊತೆ ನೀರಿಗಿಳಿದಿದ್ದ ಪ್ರದೀಪ್ ನೀರಿನಲ್ಲಿ ಮುಳುಗಿ ಸಾವನ್ನೊಪ್ಪಿದ್ದಾನೆ.
ನೀರಿನಿಂದ ಪ್ರದೀಪ್ ಮೃತ ದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ..ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಸರ್ಜನೆಗೆ ಸರಕಾರದಿಂದ ನಿಗದಿಪಡಿಸಿದ ಸ್ಥಳಗಳನ್ನು ಆಯ್ಕೆ ಮಾಡಿ, ಉದಾಹರಣೆಗೆ ನಿಗದಿತ ಕೊಳಗಳು, ಸರೋವರಗಳು ಅಥವಾ ಕೃತಕ ತೊಟ್ಟಿಗಳು. ಅಪಾಯಕಾರಿ ನೀರಿನ ಸ್ಥಳಗಳನ್ನು ತಪ್ಪಿಸಿ.
ಆಳವಾದ ನೀರಿನಲ್ಲಿ ವಿಸರ್ಜನೆ ಮಾಡುವಾಗ ಜೀವರಕ್ಷಕ ಜಾಕೆಟ್ ಧರಿಸಿ.
ಗುಂಪಿನಲ್ಲಿ ವಿಸರ್ಜನೆ ಮಾಡುವಾಗ ಜನಸಂದಣಿಯನ್ನು ನಿಯಂತ್ರಿಸಿ.
ಮಕ್ಕಳು ಮತ್ತು ವೃದ್ಧರಿಗೆ ವಿಶೇಷ ಕಾಳಜಿ ವಹಿಸಿ.