ಕೆರೆಯಲ್ಲಿ ಮುಳುಗಿ ಯುವಕ ಸಾವು

Neelappa Hotteppanavar
Published on

ಗುತ್ತಲ: ಜಾನುವಾರು ಮೈ ತೊಳೆಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸಮೀಪದ ಕೂರಗುಂದ ಗ್ರಾಮದಲ್ಲಿ ಸೋಮವಾರ ಜರುಗಿದೆ.

ಗ್ರಾಮದ ನೀಲಪ್ಪ ಕಲ್ಲಪ್ಪ ಹೊಟ್ಟೆಪ್ಪನವರ(16) ಮೃತ ಯುವಕ. ಗ್ರಾಪಂ ಪಕ್ಕದಲ್ಲಿರುವ ಕೆರೆಗೆ ಬೆಳಗ್ಗೆ ಹೋಗಿದ್ದ ನೀಲಪ್ಪ, ಎತ್ತುಗಳ ಮೈ ತೊಳೆದಿದ್ದ. ನಂತರ ಆಕಳ ತೊಳೆಯಲು ಮುಂದಾದಾಗ ಅದು ಕೆರೆಗೆ ಇಳಿದಿದೆ. ಆಗ ಆಕಳಿನ ಕೊರಳಲ್ಲಿದ್ದ ಹಗ್ಗವು ಯುವಕ ಕಾಲಿಗೆ ಸುತ್ತಿಕೊಂಡ ಪರಿಣಾಮ ನೀಲಪ್ಪ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣವೇ ಅಲ್ಲಿದ್ದ ಜನರು ಕೆರೆಗೆ ಜಿಗಿದು ಯುವಕನನ್ನು ಹೊರತಂದು ಗುತ್ತಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿದ್ದಾರೆ. ಆದರೆ, ಈ ವೇಳೆಗಾಗಲೇ ಯುವಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net