

ಕಾನಹೊಸಹಳ್ಳಿ: ನಿಂಬಳಗೆರೆ ಗ್ರಾಮದಲ್ಲಿ ಶನಿವಾರ ಗೋಕಟ್ಟೆಯಲ್ಲಿ ಈಜಾಡಲು ಇಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಗ್ರಾಮದ ಸಂದೀಪ (19) ಮೃತ. ಗ್ರಾಮ ಹೊರವಲಯದ ಗೋಕಟ್ಟೆ ಇಬ್ಬರು ಸ್ನೇಹಿತರೊಂದಿಗೆ ಈಜಾಡಲು ಹೋಗಿದ್ದಾರೆ. ಈ ಪೈಕಿ ಇಬ್ಬರು ನೀರಿಗಿಳಿದಿದ್ದು, ಸಂದೀಪ ಮುಳುಗಿದ್ದಾನೆ.
ಇನ್ನೊಬ್ಬ ಈಜಿ ದಡ ಸೇರಿದ್ದಾನೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕಾನಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.