ಮುಂಡಗೋಡ: ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿ ಬುಧವಾರ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕನೊಬ್ಬ ನೀರು ಪಾಲಾದ ಘಟನೆ ನಡೆದಿದ್ದು, ಪೊಲೀಸರು ಮತ್ತು ಅಗ್ನಿಶಾಮಕದಳದವರು ಮೃತದೇಹಕ್ಕೆ ಶೋಧ ನಡೆಸಿದ್ದಾರೆ.
ತಾಲೂಕಿನ ಮುಡಸಾಲಿ ಗ್ರಾಮದ ಶ್ರೀಕಾಂತ ಹರಿಜನ (20) ನೀರುಪಾಲಾದ ಯುವಕ. ಮುಡಸಾಲಿ ಗ್ರಾಮದ ಎಂಟು ಸ್ನೇಹಿತರು ಜಲಾಶಯ ನೋಡಲು ಹೋಗಿದ್ದರು. ಈ ವೇಳೆ ಶ್ರೀಕಾಂತ ಹಾಗೂ ಮತ್ತೊಬ್ಬ ಯುವಕ ಜಲಾಶಯಕ್ಕೆ ಇಳದಿದ್ದಾರೆ. ಒಬ್ಬ ಯುವಕ ಈಜಿ ಮೇಲೆ ಬಂದಿದ್ದಾನೆ. ಆದರೆ ಶ್ರೀಕಾಂತ ನೀರಿನಿಂದ ಮೇಲಕ್ಕೆ ಬಾರದೆ ಮುಳಗಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.