ಕೆರೆಯಲ್ಲಿ ಈಜಲು ಹೋಗಿ ಯುವಕ ಸಾವು

27_ mlv 2 ಪ್ರವೀಣ್(26)
Published on

ಮಳವಳ್ಳಿ: ತಾಲೂಕಿನ ಮಾರೇಹಳ್ಳಿ ಸಮೀಪದ ಪೂರಿಗಾಲಿ ಮುಖ್ಯರಸ್ತೆ ಬದಿಯಲ್ಲಿರುವ ಮಾರೇಹಳ್ಳಿ ಕೆರೆಯಲ್ಲಿ ಮಂಗಳವಾರ ಯುವಕನೊಬ್ಬ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಚನ್ನಪಟ್ಟಣ ತಾಲೂಕಿನ ತೋಟದಹಳ್ಳಿ ಗ್ರಾಮದ ವೆಂಕಟಚಲಯ್ಯ ಎಂಬುವರ ಪುತ್ರ ಪ್ರವೀಣ್(26) ಮೃತರು. ಈತ ತನ್ನ ತಾಯಿ ತವರು ಮನೆ ಮಾರೇಹಳ್ಳಿಗೆ ಬಂದಿದ್ದು, ಸೋದರ ಮಾವನ ಜತೆಗೂಡಿ ಜಮೀನಿಗೆ ತೆರಳಿದ್ದಾಗ ಪಕ್ಕದಲ್ಲೇ ಇದ್ದ ದೊಡ್ಡಕೆರೆಯಲ್ಲಿ ಈಜಲು ಇಳಿದಿದ್ದಾನೆ. ಈಜುವ ಸಂದರ್ಭದಲ್ಲಿ ಕೆರೆಯ ಕೆಸರಿನಲ್ಲಿ ಕಾಲು ಸಿಲುಕಿಕೊಂಡು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೂಡಲೇ ಇದೇ ಕೆರೆಯಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರು ಧಾವಿಸಿ ಶವವನ್ನು ಮೇಲೆತ್ತಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net