

ಶಿಕಾರಿಪುರ: ಪಟ್ಟಣದ ಕುಟ್ರಹಳ್ಳಿ ನೂತನ ಕೆಎಸ್‌ಆರ್‌ಟಿಸಿ ಡಿಪೋ ಎದುರು ಗುರುವಾರ ಬಸ್‌ಗೆ ಬೈಕ್ ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ತಾಲೂಕಿನ ಪುನೇದಹಳ್ಳಿಯ ಗಜೇಂದ್ರ ಆಚಾರ್ (23) ಮೃತ ದುರ್ದೈವಿ. ಡಿಪೋ ಒಳಗೆ ಬರುತ್ತಿದ್ದ ಬಸ್‌ಗೆ ಬೈಕ್ ಡಿಕ್ಕಿಯಾಗಿ ಸವಾರ ಗಜೇಂದ್ರ ಸ್ಥಳದಲ್ಲೇ ಮೃತಪಟ್ಟನು. ಹಿಂಬದಿ ಸವಾರ ನಂದನ್‌ಗೆ ತೀವ್ರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಜೇಂದ್ರ ಆಚಾರ್ ಬುಧವಾರ ತನ್ನ ಜನ್ಮೋತ್ಸವವನ್ನು ಆಚರಿಸಿಕೊಂಡಿದ್ದ. ಆದರೆ ವಿಧಿ ಇಂದು ಆತನನ್ನು ತನ್ನತ್ತ ಸೆಳೆದುಕೊಂಡಿದೆ. ಈ ಸಾವಿನಿಂದ ಗಜೇಂದ್ರ ಆಚಾರ್ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ಎರಡು ದಿನದ ಹಿಂದೆ ಇದೇ ಜಾಗದಲ್ಲಿ ಬೈಕ್ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಈತ ಕೂಡ ಪುನೇದಹಳ್ಳಿಯ ನಿವಾಸಿ.
ವಾರದಲ್ಲಿ ಎರಡು ಅಪಘಾತಗಳಾಗಿ ಎರಡು ಜೀವಗಳು ಹೋದ ಕಾರಣ ಎರಡೂ ಕಡೆಗೆ ಹಂಪ್ ಹಾಕಬೇಕು. ಡಿಪೋ ಬೋರ್ಡ್ ದೊಡ್ಡದಾಗಿ ಬರೆಸಿ ಹಾಕಿಸಬೇಕು ಎಂದು ಸಂಬಂಧಿಸಿದವರಿಗೆ ಪತ್ರ ಬರೆಯುತ್ತೇನೆ. ರಾಜ್ಯ ಹೆದ್ದಾರಿಯಾದ ಕಾರಣ ವಾಹನಗಳು ಹೆಚ್ಚು ವೇಗದಲ್ಲಿ ಬರುತ್ತಿರುತ್ತವೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಎಲ್.ಪಾಟೀಲ್ ಹೇಳಿದರು.