

ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ನಡುವೆ ರೈಲು ಡಿಕ್ಕಿಯಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
25 ರಿಂದ 30 ವರ್ಷ ಮೃತಪಟ್ಟಿದ್ದು ಹಳಿ ಮೇಲೆ ಶನಿವಾರ ಮೃತದೇಹ ಗಮನಿಸಿದ ಕುವೆಂಪು ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲೆಟ್ ನಿಲ್ದಾಣಕ್ಕೆ ಮಾಹಿತಿ ರವಾನಿಸಿದ್ದರು. ಬಲಗೈ ಭುಜದ ಬಳಿ ಅಮ್ಮ ಎಂಬ ಹಚ್ಚೆ ಗುರುತಿದ್ದು ಘಟನೆ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.