ರಸ್ತೆ ಅಪಘಾತಕ್ಕೆ ಯುವಕ ಬಲಿ

crime-logo
Published on

ಹರಿಹರ: ನಗರದ ಗಾಂಧಿ ವೃತ್ತದ ಬಳಿ ಹರಪನಹಳ್ಳಿ ರಸ್ತೆಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ನಗರದ ಎಚ್. ಕೊಟ್ರೇಶ ಅವರ ಪುತ್ರ ಮನೋಜ್ ಕೆ. ಮನುಗುದ್ರಿ (20)ಸಾವನ್ನಪ್ಪಿದ್ದಾನೆ.

ದಾವಣಗೆರೆ ಕಡೆಯಿಂದ ಗಾಂಧಿ ವೃತ್ತದ ಮೂಲಕ ಬಂದ ಬೈಕ್ ಹರಪನಹಳ್ಳಿ ರಸ್ತೆ ಪಕ್ಕ ಪಾಕಿರ್ಂಗ್ ಸ್ಥಳದಲ್ಲಿ ಇಟ್ಟಿದ್ದ ಬ್ಯಾರಿಕೇಡ್‌ಗೆ ಡಿಕ್ಕಿಯಾಗಿದೆ. ಹಿಂಬದಿ ಕುಳಿತಿದ್ದ ಮನೋಜ್ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಬೈಕ್ ಚಾಲನೆ ಮಾಡುತ್ತಿದ್ದ ಪ್ರಸನ್ನ ಎನ್.ಕೆ. ಗಾಯಗೊಂಡಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತದ್ದಾನೆ.

ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಮೃತ ಮನೋಜ್‌ನನ್ನು ಸ್ನೇಹಿತ ಪ್ರಸನ್ನನ ಹುಟ್ಟುಹಬ್ಬ ಮುಗಿಸಿಕೊಂಡು ಬರುವಾಗ ಅಪಘಾತವಾಗಿದೆ ಎಂದು ಮನೋಜ್ ತಂದೆ ಕೊಟ್ರೇಶ್ ದೂರಿನಲ್ಲಿ ವಿವರಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net