ರಸ್ತೆ ಅಪಘಾತದಲ್ಲಿ ಯುವಕ ಸಾವು

30 yelandur 05
Published on

ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಕೆ.ಗುಡಿ ರಸ್ತೆಯಲ್ಲಿ ಶನಿವಾರ ಸಂಜೆ ರಸ್ತೆ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.


ಕೊಳ್ಳೇಗಾಲದ ಬಸ್ತಿಪುರ ನಿವಾಸಿ ಸೃಜನ್(22) ಎಂದು ಮೃತ ಯುವಕ. ದರ್ಶನ್, ಮಹೇಶ್, ಶಶಾಂಕ್ ಗಾಯಗೊಂಡಿದ್ದಾರೆ. ಇವರೆಲ್ಲರೂ ಬೆಂಗಳೂರಿನ ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದು, ಸುದೀಪ್, ಶ್ರೀನಿವಾಸ್ ಸೇರಿ ಒಟ್ಟು ಆರು ಯುವಕರು ಷೆವರ್ಲೆಟ್ ವಾಹನದಲ್ಲಿ ಬಿಳಿಗಿರಿರಂಗನಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದರು.

ಬೆಟ್ಟದಲ್ಲಿ ದೇವರ ದರ್ಶನ ಪಡೆದು ಚಾಮರಾಜನಗರಕ್ಕೆ ಕೆ.ಗುಡಿ ರಸ್ತೆ ಮೂಲಕ ತೆರಳುತ್ತಿದ್ದ ವೇಳೆ ದೊಡ್ಡಸಂಪಿಗೆಗೆ ತೆರಳುವ ಚೈನ್ ಗೇಟ್ ಬಳಿಯ ತಿರುವಿನಲ್ಲಿ ವಾಹನ ನಿಯಂತ್ರಣ ತಪ್ಪಿ ತಡೆಗೋಡೆ ಡಿಕ್ಕಿಯಾಗಿದೆ. ಪರಿಣಾಮ ವಾಹನ ಚಲಾಯಿಸುತ್ತಿದ್ದ್ದ ಸೃಜನ್ ಸ್ಥಳದಲ್ಲೇ ಅಸುನೀಗಿದರೆ ದರ್ಶನ್, ಮಹೇಶ್, ಶಶಾಂಕ್ ಗಾಯಗೊಂಡರು. ಸುದೀಪ್, ಶ್ರೀನಿವಾಸ್ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಬೆಟ್ಟದಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರಕ್ಕೆ ಸಾಗಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪಟ್ಟಣ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

30ವೈಎಲ್‌ಡಿ ಚಿತ್ರ05 ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಕೆ.ಗುಡಿ ರಸ್ತೆಯಲ್ಲಿ ಶನಿವಾರ ಸಂಜೆ ನಡೆದ ರಸ್ತೆ ಅಪಘಾತ ಸ್ಥಳದಲ್ಲಿ ಜಮಾವಣೆಗೊಂಡಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net