ಕಾಲು ಜಾರಿ ಬಿದ್ದು ಯುವಕ ಸಾವು

IMG-20241225-WA0018.jpg
Published on

ಬೆಳಗಾವಿ: ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಯುವಕನೊರ್ವ ಕೈ ಕಾಲು ತೊಳೆಯಲು ಹೋಗಿ ಕಾಲು ಜಾರಿ ಬಿಸಿ ನೀರಿನ ಟ್ಯಾಂಕ್ ದಲ್ಲಿ ಬಿದ್ದು ಸಾವನೊಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಹೊರವಲಯದ ಹಿರಾ ಶುಗರ್ ಸಕ್ಕರೆ ಕಾರ್ಖಾನೆಯ ಸ್ಪ್ರೇಪೌಂಡ್ ನೀರಿನ ಟ್ಯಾಂಕ್ ನಲ್ಲಿ ಇಂದು (ಬುಧವಾರ ) ಮುಂಜಾನೆ ನಡೆದಿದೆ.

ಮೃತ ಯುವಕ ಗೋಟುರು ಗ್ರಾಮದ ವಿನಾಯಕ ಸಂಜಯ ಗೊರವ್ವಗೋಳ(೨೨) ಎ‌ಂದು ತಿಳಿದು ಬಂದಿದೆ. ಇತನ್ನು ಮಾನಸಿಕ ಅಸ್ವಸ್ಥನಾಗಿದ್ದು, ಮಂಗಳವಾರ ಬೆಳಿಗ್ಗೆ ಸುಮಾರು 8 ಗಂಟೆಗೆ ಕಬ್ಬು ಗಾಡಿಗಳ ಮೇಲೆ ಕೂಲಿ ಕೆಲಸಕ್ಕಾಗಿ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದ.ಬುಧವಾರ ಮುಂಜಾನೆ ಸ್ಪ್ರೇಪೌಂಡ್ ನೀರಿನ ಟ್ಯಾಂಕಿನಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಸಂಕೇಶ್ವರ ಪೋಲಿಸ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net