ಬೈಕ್‌ಗೆ ಲಾರಿ ಡಿಕ್ಕಿಯಾಗಿ ಯುವಕ ಸಾವು

ACCIDENT
Published on

ನಾಗಮಂಗಲ: ಪಟ್ಟಣದ ಹೊರವಲಯ ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಚೌಡೇನಹಳ್ಳಿ ಸಮೀಪ ಶುಕ್ರವಾರ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲೂಕಿನ ಹೊಣಕೆರೆ ಹೋಬಳಿ ಉಪ್ಪಾರಕೊಪ್ಪಲು ಗ್ರಾಮದ ಕೃಷ್ಣಪ್ಪ ಅವರ ಪುತ್ರ ನಾಗೇಶ್(35) ಮೃತ ದುರ್ಧೈವಿ. ಶುಕ್ರವಾರ ಕಾರ್ಯನಿಮಿತ್ತ ನಾಗಮಂಗಲ ಪಟ್ಟಣದಿಂದ ಬೆಳ್ಳೂರಿಗೆ ನಾಗೇಶ್ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಅಕ್ಕಿ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೂ ಚಾಲಕ ಲಾರಿ ನಿಲ್ಲಿಸದೆ ಎಪಿಎಂಸಿ ಆವರಣದೊಳಗೆ ತೆರಳಿ ಅಕ್ಕಿ ತೂಕ ಮಾಡಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದ. ಸುದ್ದಿ ತಿಳಿದು ಪಟ್ಟಣ ಠಾಣೆಯ ಪೊಲೀಸರು ಕಲ್ಲುದೇವನಹಳ್ಳಿ ಬಳಿ ಚಾಲಕ ಮತ್ತು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ನಾಗೇಶ್ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನೆ ಸಂಬಂಧ ನಾಗಮಂಗಲ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net