ಸೆಲ್ಫಿ ವೀಡಿಯೋ ಮಾಡಿ ನದಿಗೆ ಹಾರಿದ್ದ ಯುವಕನ ಶವ ಕೊನೆಗೂ ಪತ್ತೆ

River
Published on


ಗದಗ: ಸೆಲ್ಫಿ ವೀಡಿಯೋ ಮಾಡಿ ನದಿಗೆ ಹಾರಿದ್ದ ಯುವಕನ ಶವ ಶುಕ್ರವಾರ ಪತ್ತೆಯಾಗಿದೆ. ವಿಶ್ವನಾಥ್ ಗಣಾಚಾರಿ(26) ಎಂಬ ಯುವಕ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ.


ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬ್ರಿಡ್ಜ್ ನಿಂದ ಹಾರಿದ್ದ ಯುವಕನ ಶವಕ್ಕಾಗಿ ತೀವ್ರ ಶೋಧ ನಡೆಸಲಾಗಿತ್ತು. ಕ್ರಿಕೆಟ್ ಟೀಮ್ ನಿಂದ ಹೊರ ಹಾಕಿದ್ದಕ್ಕೆ ಮನನೊಂದು ಜುಲೈ 20ರಂದು ಮಧ್ಯಾಹ್ನ ನದಿಗೆ ಹಾರಿದ್ದ, ಇದೀಗ ಎರಡು ದಿನಗಳ ಬಳಿಕ ಕಕ್ಕೂರು ಗ್ರಾಮದ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ನದಿಗೆ ಹಾರಿದ್ದ ಜಾಗದಿಂದ 10 ಕಿಲೋಮೀಟರ್​ ದೂರದಲ್ಲಿ ನದಿ ತಿರುವಿನ ಪೊದೆಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮುಂಡಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net