ನದಿಗೆ ಹಾರಿ ಯುವಕ ಆತ್ಮಹತ್ಯೆ

23sri-1 (1)
ಶರತ್.ಕೆ.ಬಿ.
Published on

ಶೃಂಗೇರಿ: ಪಟ್ಟಣದ ನಿವಾಸಿ ಕೆ.ಬಿ.ಶರತ್(30) ಭಾನುವಾರ ಕುರುಬಕೇರಿ ಸಮೀಪ ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿವಿಲ್ ಇಂಜಿನಿಯರ್ ಅಗಿದ್ದ ಶರತ್ ಬೆಂಗಳೂರಿನಲ್ಲಿ ಎಂಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ಕೆಲಸ ಬಿಟ್ಟು ಬೇರೆಡೆ ಕೆಲಸ ಹುಡುಕುತ್ತಿದ್ದರು. ಮಣಿಪಾಲದಲ್ಲಿ ಉದ್ಯೋಗ ಲಭಿಸಿದ್ದು, ಪೋಟೋ ತೆಗೆಸಿಕೊಂಡು ಬರುವುದಾಗಿ ಹೇಳಿ ಮನೆಯಿಂದ ತೆರಳಿದ ಅವರು ಸಂಜೆಯಾದರೂ ಬಾರದ ಕಾರಣ ಶರತ್ ತಂದೆ ಬಸವರಾಜ್ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು. ಪೊಲೀಸರು ಹುಡುಕಾಟ ನಡೆಸುವಾಗ ಶರತ್ ಶವ ಸೋಮವಾರ ರಾತ್ರಿ ತುಂಗಾ ನದಿ ಸಮೀಪ ಪತ್ತೆಯಾಗಿದೆ. ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net