

ಮೈಸೂರು: ಅನಾರೋಗ್ಯದಿಂದ ಬೇಸತ್ತು ಯುವಕ ತಾಲೂಕಿನ ಉದ್ಬೂರು ಗ್ರಾಮದ ದೊಡ್ಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗ್ರಾಮದ ನಿವಾಸಿ ದಿ. ಮರದ ನಾಯಕ ಅವರ ಪುತ್ರ ಕೆಂಪಚೌಡ ನಾಯಕ(25) ಮೃತ ಯುವಕ. ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪಚೌಡ ನಾಯಕ, ಎರಡು ದಿನದ ಹಿಂದೆ ಮನೆಯಿಂದ ತೆರಳಿದ್ದು, ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತರ ಪಾಲಕರು ದೂರು ನೀಡಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.