

ಹುಬ್ಬಳ್ಳಿ: ಅಂತಾರಾಜ್ಯ ಡ್ರಗ್ ಪೆಡಲರ್ಗಳೊಂದಿಗೆ ನಂಟು ಹೊಂದಿದ್ದ ತಾಲೂಕಿನ ಅದರಗುಂಚಿ ಗ್ರಾಮದ ಸೂರಜಗೌಡ ಕಾನಗೌಡರ ಅವರನ್ನು ತಮಿಳುನಾಡಿನ ಪೊಲೀಸರು ಬಂಧಿಸಿದ್ದಾರೆ.
ಸೂರಜಗೌಡ ನಗರದ ಜನತಾ ಬಜಾರ್ನ ಮೆಡಿಕಲ್ ಶಾಪ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೆಲವು ತಿಂಗಳಿಂದ ಅಂತಾರಾಜ್ಯ ಡ್ರಗ್ ಪೆಡಲರ್ಗಳೊಂದಿಗೆ ನಂಟು ಬೆಳೆಸಿ, ನಿರ್ಬಂಧಿತ ಮೆಡಿಸಿನ್ ಮಾರಾಟ ಮಾಡುತ್ತಿದ್ದ. ಡ್ರಗ್ಸ್ ಪ್ರಕರಣದಡಿ (ಎನ್ಡಿಪಿಎಸ್) ಕೆಲವರನ್ನು ತಮಿಳುನಾಡು ಕೊಯಮತ್ತೂರಿನ ಪಿಲಮೇಡು ಪೊಲೀಸರ ವಿಚಾರಣೆ ನಡೆಸಿದಾಗ ಸೂರಜ್ ಹೆಸರು ಬಯಲಾಗಿದೆ. ಪ್ರಕರಣದ ಜಾಡು ಹಿಡಿದು ಸೋಮವಾರ ಹುಬ್ಬಳ್ಳಿಗೆ ಆಗಮಿಸಿದ್ದ ತಮಿಳುನಾಡಿನ ಪೊಲೀಸರು, ನಿರ್ಬಂಧಿತ ಮೆಡಿಷಿನ್ ಖರೀದಿಸುವ ನೆಪದಲ್ಲಿ ಮೆಡಿಕಲ್ ಶಾಪ್ಗೆ ಕರೆಯಿಸಿಕೊಂಡು ಸೂರಜಗೌಡನನ್ನು ಬಂಧಿಸಿದ್ದಾರೆ. ಈ ಕುರಿತು ಪೊಲೀಸರು ಹುಬ್ಬಳ್ಳಿ ಗ್ರಾಮೀಣ ಹಾಗೂ ಉಪನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂಬುದು ತಿಳಿದುಬಂದಿದೆ.