ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೆಳ್ಳಂಬೆಳಗ್ಗೆ ಯೋಗ-ಧ್ಯಾನದಲ್ಲಿ ತಲ್ಲೀನರಾದ ಕೈದಿಗಳು!

parappana agrahara jail
Published on

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮನಃಪರಿವರ್ತನೆಗೆ ಮುಂದಾದ ಜೈಲಧಿಕಾರಿಗಳು ನಿತ್ಯ ಯೋಗ-ಧ್ಯಾನ ಮಾಡಿಸುತ್ತಿದ್ದಾರೆ.

ಪ್ರತಿನಿತ್ಯ ಬೆಳಗ್ಗೆ 6.15 ರಿಂದ 8.30ರ ವರೆಗೆ 60 ಕೈದಿಗಳಿಗೆ ಆರ್ಟ್ ಆಫ್ ಲಿವಿಂಗ್ ವತಿಯಿಂದ ಇಬ್ಬರು ತರಬೇತುದಾರರು ಯೋಗ ಮತ್ತು ಧ್ಯಾನ ಹೇಳಿಕೊಡುತ್ತಾರೆ. ಒಂದು ವಾರಕ್ಕೆ 60 ಮಂದಿಗೆ ತರಬೇತಿ ಕೊಡಲಾಗುತ್ತೆ. ಬಳಿಕ ಮತ್ತೊಂದು ಬ್ಯಾಚ್​ಗೆ ಯೋಗ-ಧ್ಯಾನ ಹೇಳಿಕೊಡಲಾಗುತ್ತೆ. ಈ ಶಿಬಿರವನ್ನು ವರ್ಷ ಪೂರ್ತಿ ನಡೆಸಲು ಜೈಲಿನ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net