

ಸಾಗರ: ನಗರದಲ್ಲಿ ಕಳೆದ ಎರಡು ದಿನಗಳಿಂದ ಮಳೆ ತಂಪೆರೆಯುತ್ತಿದ್ದು ಶುಕ್ರವಾರ ರಾತ್ರಿ ಕೂಡ ರಭಸದ ವರ್ಷಧಾರೆ ಆಗಿದೆ. ಶನಿವಾರ ಬೆಳಗ್ಗಿನಿಂದ ಮೋಡ ಕವಿದ, ತಂಪಾದ ವಾತಾವರಣವಿದ್ದು ಮಧ್ಯಾಹ್ನದ ವೇಳೆಗೆ ಭರ್ಜರಿ ಮಳೆಯಾಯಿತು.
ಗೌರಿ-ಗಣೇಶ ಹಬ್ಬದ ಮುನ್ನಾದಿನ ಆಗಿರುವುದರಿಂದ ಸಾರ್ವಜನಿಕರು ಸಾಮಗ್ರಿಗಳ ಖರೀದಿಯ ಭರಾಟೆಯಲ್ಲಿ ತೊಡಗಿದ್ದು ವ್ಯಾಪಾರ ವಹಿವಾಟಿಗೂ ಸ್ವಲ್ಪ ಅಡಚರಣೆ ಉಂಟಾಯಿತು.
ಆದರೆ ಮಳೆಯೇ ಇಲ್ಲದೆ ಕಂಗಾಲಾಗಿದ್ದ ಜನ ಕೊಂಚ ಮಳೆ ಬೀಳುತ್ತಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ.