

ಯಲ್ಲಾಪುರ: ಮಹಿಳೆಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಪಪಂ ಸದಸ್ಯರೊಬ್ಬರ ವಿರುದ್ಧ ಇಲ್ಲಿನ ಠಾಣೆಯಲ್ಲಿ ಬುಧವಾರ ರಾತ್ರಿ ಪ್ರಕರಣ ದಾಖಲಾಗಿದೆ.
ಉದ್ಯಮನಗರದ ಸಾರ್ವಜನಿಕ ದಾರಿ ಸರ್ವೆ ನಂ. 4ಎ1ಎ1ಎ1 ನೇದಕ್ಕೆ ಸಂಬಂಧಿಸಿದಂತೆ ವಿವಾದಿತ ಜಾಗೆಯಲ್ಲಿ ಪಪಂ ಸದಸ್ಯ ಕೈಸರ್ ಸೈಯ್ಯದ್ ಅಲಿ ಕಾಮಗಾರಿ ಆರಂಭಿಸಿದ್ದಾನೆ. ಇದನ್ನು ಪ್ರಶ್ನಿಸಿದ ಹಸನ್ಸಾಬ ಕಾನಳ್ಳಿ ಎಂಬವವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಿನ್ನನ್ನು ಸುಟ್ಟು ಬಿಡುತ್ತೇನೆಂದು ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಬಿಬಿ ಆಯಿಷಾ ಶೇಖ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುದ್ದಿಗೋಷ್ಠಿ: ಕೈಸರ್ ಸೈಯ್ಯದ್ ಅಲಿ ಅವರು 2019 ರಲ್ಲಿ ಉದ್ಯಮ ನಗರದಲ್ಲಿ ರಾಜಿಯಾ ಸೈಯ್ಯದ್ ಸದ್ರುದ್ದೀನ್ ಹಾಗೂ ರಬಿಯಾಬಿ ಮಹಮ್ಮದ್ ಶರೀಫ್ ಶೇಖ ಅವರೊಂದಿಗೆ ಸೇರಿ ಸಾರ್ವಜನಿಕ ರಸ್ತೆ ಅತಿಕ್ರಮಿಸಿ ಕಟ್ಟಡ ನಿರ್ವಣಕ್ಕೆ ಮುಂದಾಗಿದ್ದರು. ಸಾರ್ವಜನಿಕರ ದೂರು ಆಧರಿಸಿ ಅತಿಕ್ರಮಣ ಜಾಗೆ ತೆರವುಗೊಳಿಸುವಂತೆ ಪಪಂ ನೋಟಿಸ್ ನೀಡಿತ್ತು. ಆದರೂ, ಯಾವುದೇ ಕ್ರಮ ಪ್ರಯೋಜನವಾಗಿಲ್ಲ ಆಯಿಷಾ ಶೇಖ ದೂರಿದರು.
ಹಸನ್ಸಾಬ ಕಾನಳ್ಳಿ ಇದ್ದರು