ಮೂಡುಬಿದಿರೆಯಲ್ಲಿ ಅಪಘಾತ: ಯಕ್ಷಗಾನ ಕಲಾವಿದ ಸ್ಥಳದಲ್ಲೇ ಸಾವು

yakshagana vamana death
Published on

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಗಂಟಾಲ್ಕಕಟ್ಟೆಯಲ್ಲಿ ಓಮ್ನಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯಕ್ಷಗಾನ ಕಲಾವಿದ ವಾಮನ ಕುಮಾರ್ ಮೃತಪಟ್ಟಿದ್ದಾರೆ.

ವೇಣೂರು ಸಮೀಪದ ವಾಮನ ಕುಮಾರ್ ಅವರಿಗೆ 47 ವರ್ಷ ವಯಸ್ಸಾಗಿತ್ತು. ಬಡಗು ತಿಟ್ಟಿನ ಯಕ್ಷಗಾನ ಮೇಳದಲ್ಲಿ ಹಾಗೂ ಚಿಕ್ಕಮೇಳದಲ್ಲಿ ಯಕ್ಷ ಕಲಾವಿದರಾಗಿದ್ದರು.

ಕುಂದಾಪುರದ ಕೊಂಕಿ‌ ಎಂಬಲ್ಲಿ ಯಕ್ಷಗಾನ ಮುಗಿಸಿ ಬೈಕ್​ನಲ್ಲಿ ಬರುವಾಗ ಮಾರ್ಗಮಧ್ಯೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net