

ಯಾದಗಿರಿ: ಮಹಿಳೆಯನ್ನ ವಿವಸ್ತ್ರಗೊಳಿಸಿ ಅಂಗಾಂಗ ಮುಟ್ಟಿ ಆಕೆಗೆ ಮನಬಂದಂತೆ ಥಳಿಸಿ ವಿಡಿಯೋ ಚಿತ್ರೀಕರಿಸಿದ್ದ ಪ್ರಕರಣ ಮತ್ತೊಂದು ತಿರುವು ಪಡೆದಿದೆ.
ಯಾದಗಿರಿಯ ಚಟ್ನಳ್ಳಿ ಹಾಗೂ ಹಳಿಸಗರ ಗ್ರಾಮದ ನಡುವಿನ ಸುತ್ತಮುತ್ತ ಈ ಘಟನೆ ಕೆಲ ತಿಂಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಗೆ ಹಿಂಸಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈಗಾಗಲೇ ನಾಲ್ವರು ಆರೋಪಿಗಳನ್ನು ಸಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ಹನಿಟ್ರ್ಯಾಪ್ ಮಾಡುತ್ತಿದ್ದಳು. ಹಣದ ಆಮಿಷವೊಡ್ಡಿ ಮಾನಸಿಕ ಹಿಂಸೆ ನೀಡುತ್ತಿದ್ದಳು. ಈ ಕಾರಣಕ್ಕೆ ಆಕೆಯನ್ನ ಕರೆಸಿಕೊಂಡು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೆಚ್ಚಿನ ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.
ಈ ಪ್ರಕರಣ ಸಂಬಂಧ ನಿಂಗರಾಜ ದೋರನಹಳ್ಳಿ, ಭೀಮಾಶಂಕರ ಹಳಿಸಗರ, ಅಯ್ಯಪ್ಪ ಮಮದಾಪುರ ಹಾಗೂ ಶರಣು ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.