ಪ್ರೇಕ್ಷಕರನ್ನು ರಂಜಿಸಿದ ಕುಸ್ತಿ ಪಂದ್ಯಾವಳಿ

A wrestling tournament that entertained the crowd
ಬನಹಟ್ಟಿಯಲ್ಲಿ ಕುಸ್ತಿ ಪಂದ್ಯಾವಳಿಗೆ ಹಿರಿಯರು ಚಾಲನೆ ನೀಡಿದರು. ಮಲ್ಲಿಕಾರ್ಜುನ ತುಂಗಳ, ಮಲ್ಲಣ್ಣ ಬಾವಲತ್ತಿ, ಸಿದ್ಧನಗೌಡ ಪಾಟೀಲ, ಶ್ರೀಶೈಲ ದಭಾಡಿ ಇತರರಿದ್ದರು.
Published on

ರಬಕವಿ/ಬನಹಟ್ಟಿ: ಬನಹಟ್ಟಿಯ ಶ್ರೀ ಮಲ್ಲಿಕಾರ್ಜುನ ಜಾತ್ರೆ ನಿಮಿತ್ತ ಅನೇಕ ಜಗಜಟ್ಟಿಗಳ ನಡುವೆ ಅದ್ದೂರಿ ಜಂಗಿ ನಿಕಾಲಿ ಕುಸ್ತಿಗಳು ನಡೆದವು. ಮಹಿಳೆಯರ ಕುಸ್ತಿಗಳು ಪ್ರೇಕ್ಷಕರಿಗೆ ರಸದೌತಣ ನೀಡಿದವು. ಕುಸ್ತಿ ವೀಕ್ಷಿಸಲು ಅನೇಕ ಗ್ರಾಮ ಮತ್ತು ಪಟ್ಟಣಗಳಿಂದ ಅಪಾರ ಪ್ರಮಾಣದ ಜನಸಾಗರ ಹರಿದು ಬಂದಿತ್ತು.

ಭಾನುವಾರ ಸಂಜೆ 4ಕ್ಕೆ ಬನಹಟ್ಟಿ ಸೋಮವಾರ ಸಮಸ್ತ ಧೈವ ಮಂಡಳಿ ಚೇರ್ಮನ್ ಮಲ್ಲಿಕಾರ್ಜುನ ತುಂಗಳ ಕುಸ್ತಿ ಮೈದಾನಕ್ಕೆ ಪೂಜೆ ಸಲ್ಲಿಸಿದರು. ಹಿರಿಯ ಮಲ್ಲಣ್ಣ ಬಾವಲತ್ತಿ ಕುಸ್ತಿಗೆ ಚಾಲನೆ ನೀಡಿದರು.

ಕುಸ್ತಿಪಟುಗಳು ಕುಸ್ತಿ ಗೆಲ್ಲಲು ವಿರೋಚಿತ ಹೋರಾಟ ಕುಸ್ತಿ ರಸಿಕರ ಮನ ತಣಿಸಿತು. ಪ್ರೇಕ್ಷಕರು ಚಪ್ಪಾಳೆ, ಸಿಳ್ಳೆ ಮೂಲಕ ಕುಸ್ತಿಪಟುಗಳನ್ನು ಪ್ರೋತ್ಸಾಹಿಸಿದರು. ಅಪೇಕ್ಷಾ ಹಳಂಗಳಿ (ನೀಲಿ ಟೀ ಶರ್ಟ್) (ಗೆಲುವು) ಯನ್ನು ಖುಷಿ ಸಾವಳಗಿ (ಕೆಂಪು ಟೀ ಶರ್ಟ್) ಅವರು ಆರ್ಮ್‌ಡ್ ಡ್ರಾೃಗ್ (ಒಳಕೈ ರಟ್ಟೆ ಹಿಡಿದು ಚಿತ್ ಢಾವ್ ಮಾಡುವುದು) ಚಿತ್ ಡಾವ್ ಮಾಡಿ ಸಿಂಧು ಹಳಿಂಗಳಿ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.

200ಕ್ಕೂ ಹೆಚ್ಚು ಕುಸ್ತಿ ಪಟುಗಳು ವಿಭಿನ್ನ ರೀತಿಯಲ್ಲಿ ಟಾಂಗ್‌ಗಳನ್ನು ಹಾಕಿ ಕುಸ್ತಿಯಾಡಿ ನೆರೆದ ಜನರನ್ನು ರಂಜಿಸಿದರು. ಕುಸ್ತಿ ಆಡಿಸುವವರು ಅವರ ಗಮನಕ್ಕೆ ಬಾರದೆ ಅಚಾನಕ್ಕಾಗಿ ಏನಾದರೂ ತಪ್ಪುಗಳಾದರೆ ಸಾವಿರಾರು ಜನ ಕೇಕೆ ಹಾಕಿ ಕೆಲ ಕುಸ್ತಿ ಪಟುಗಳಿಗೆ ನ್ಯಾಯ ಕೊಡುವ ಕೆಲಸ ನಡೆದಿತ್ತು.

ಬನಹಟ್ಟಿ ನಗರದ ಹಿರಿಯರಾದ ಸಿದ್ಧನಗೌಡ ಪಾಟೀಲ, ಶ್ರೀಶೈಲ ದಭಾಡಿ, ರಾಮಣ್ಣ ಭದ್ರನ್ನವರ, ಮಹಾಶಾಂತ ಶೆಟ್ಟಿ, ಸಿದ್ರಾಮಪ್ಪ ಸವದತ್ತಿ, ಶಂಕರ ಜಾಲಿಗಿಡದ, ಶಿವಾನಂದ ಬಾಗೇವಾಡಿ, ಕಿರಣ ಆಳಗಿ, ಮಲ್ಲಣ್ಣ ಕಕಮರಿ, ಮಲ್ಲಪ್ಪ ಜನವಾಡ, ಶ್ರೀಪಾದ ಬಾಣಕಾರ, ಪಂಡಿತ ಪಟ್ಟಣ, ಭೀಮಶಿ ಪಾಟೀಲ, ಗಂಗಪ್ಪ ಹಾದಿಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net