ಎಲ್ಲ ಸಮುದಾಯಕ್ಕೂ ಸಲ್ಲುವ ನಾಯಕ

27Thyagarthi
ತ್ಯಾಗರ್ತಿಯಲ್ಲಿ ಏರ್ಪಡಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ವಿವಿಧ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿದರು. ಡಾ. ರಾಜನಂದಿನಿ ಕಾಗೋಡು, ರತ್ನಾಕರ ಹೊನಗೋಡು, ಶಾಂತಪ್ಪಗೌಡ, ಕೃಷ್ಣಮೂರ್ತಿ ಇತರರಿದ್ದರು.
Published on

ತ್ಯಾಗರ್ತಿ: ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾ.5ರಂದು ಸಾಗರದಲ್ಲಿ ರಾಜ್ಯಮಟ್ಟದ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸಲಾಗಿದ್ದು, ಆ ಸಮಾರಂಭದಲ್ಲಿ ಯಡಿಯೂರಪ್ಪ ಅವರನ್ನು ಅಭಿನಂದಿಸಲಾಗುವುದು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಇಲ್ಲಿನ ಭಾರತೀ ತೀರ್ಥ ಆಶ್ರಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ವಿವಿಧ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ತ್ಯಾಗರ್ತಿ ಭಾಗದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಸಮುದಾಯಕ್ಕೆ ನೀಡಿದ 2 ಕೋಟಿ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಕಾರ್ಕಳ ಸಮೀಪದ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್, ಸೋಲೂರು ಮಠ ಅಭಿವೃದ್ಧಿ, ಸಿದ್ದಾಪುರ, ಸೊರಬದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗುತ್ತಿದೆ ಎಂದರು.
ಸಮಾವೇಶದ ಯಶಸ್ವಿಗಾಗಿ ಕಾರ್ಯಕರ್ತರು ಮನೆಗಳಿಗೆ ತೆರಳಿ ಬಿಎಸ್‌ವೈ ಕೊಡುಗೆ ಕುರಿತು ಮನವರಿಕೆ ಮಾಡಿ ಜನರನ್ನು ಕಾರ್ಯಕ್ರಮಕ್ಕೆ ಕರೆತರಬೇಕು ಎಂದರು. ಬಿಜೆಪಿ ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ರತ್ನಾಕರ ಹೊನಗೋಡು, ಶಾಂತಪ್ಪ ಗೌಡ, ಕೊಟ್ರಪ್ಪ ನೇದರಹಳ್ಳಿ, ಕೃಷ್ಣಮೂರ್ತಿ ಹೊಸಂತೆ, ಶ್ರೀಧರ ಸಂಪಳ್ಳಿ, ನಾಗರಾಜ ಕಾಗೋಡು ದಿಂಬ, ಗೀತಾ ಪರಶುರಾಮ್, ಇಸಾಕ್ ತ್ಯಾಗರ್ತಿ, ಹನುಮಂತ, ಪಾಂಡುರಂಗ, ಅರುಣ್ ಕುಗ್ವೆ, ಕಳ್ಳಿಮಟ್ಟಿ ಗಣಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net