ಡಾಕ್ಟರ್‌ಗಳಿಲ್ಲದ ಜಗತ್ತು ಊಹಿಸಿಕೊಳ್ಳಲೂ ಆಗದು

LAXMESHWAR
ಲಕ್ಷ್ಮೇಶ್ವರ ಪಟ್ಟಣದಲ್ಲಿ ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕು ವೈದ್ಯರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ. ವೈ.ಎಫ್ ಹಂಜಿ, ಡಾ. ಎಸ್.ಕೆ. ಪೊಲೀಸ್ ಪಾಟೀಲ, ಡಾ. ಎಸ್.ಜಿ ಹೂವಿನ ಅವರನ್ನು ಸನ್ಮಾನಿಸಲಾಯಿತು.
Published on

ಲಕ್ಷ್ಮೇಶ್ವರ: ವೈದ್ಯ ವೃತ್ತಿ ಅತ್ಯಂತ ಪವಿತ್ರವಾಗಿದ್ದು ಅದಕ್ಕಾಗಿಯೇ ವೈದ್ಯೋ ನಾರಾಯಣ ಹರಿ ಎಂಬ ಭಾವನೆಯನ್ನು ಜನರು ಹೊಂದಿದ್ದಾರೆ ಎಂದು ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಹೇಳಿದರು.

ಪಟ್ಟಣದ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಸಮುದಾಯ ಭವನದಲ್ಲಿ ಲಕ್ಷ್ಮೇಶ್ವರ/ಶಿರಹಟ್ಟಿ ತಾಲೂಕು ವೈದ್ಯರ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾದ ವೈದ್ಯರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬದುಕಿನ ಜಂಜಾಟಗಳು, ಒತ್ತಡ, ಸ್ವಾರ್ಥ, ಕೌಟುಂಬಿಕ ಬದುಕಿನ ಕಷ್ಟ-ಸುಖಗಳನ್ನು ಬದಿಗೊತ್ತಿ ವೃತ್ತಿ ಧರ್ಮ ಮೆರೆಯಬೇಕಾಗುತ್ತದೆ. ವೈದ್ಯರಿಲ್ಲದ ಜಗತ್ತು ಊಹಿಸಿಕೊಳ್ಳಲೂ ಭಯವಾಗುತ್ತದೆ ಅಷೊಂದು ಮಹತ್ವ ವೈದ್ಯ ವೃತ್ತಿಗಿದೆ ಎಂದರು.

ಈ ವೇಳೆ ಹುಬ್ಬಳ್ಳಿ ಕೆಎಲ್‌ಇ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವೈ.ಎಫ್. ಹಂಜಿ, ಹಿರಿಯ ವೈದ್ಯರಾದ ಡಾ. ಎಸ್.ಕೆ ಪೊಲೀಸ್ ಪಾಟೀಲ, ಡಾ. ಎಸ್.ಜಿ. ಹೂವಿನ ಅವರನ್ನು ಸನ್ಮಾನಿಸಲಾಯಿತು.

ಡಾ. ವೈ.ಎಫ್ ಹಂಜಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವೈದ್ಯ ವೃತ್ತಿ ನಿತ್ಯ ನೂತನವಾಗಿದ್ದು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ವೈದ್ಯರನ್ನು ಗ್ರಾಹಕ ವೇದಿಕೆ ಕಾನೂನಿನಡಿ ತಂದಿರುವ ಸರ್ಕಾರದ ಕ್ರಮ ಸರಿಯಲ್ಲ. ವೈದ್ಯರಲ್ಲಿ ಸಾಮಾಜಿಕ ಕಳಕಳಿ, ಜವ್ದಾಬ್ದಾರಿ, ಸೇವಾ ಮನೋಭಾವ ಅತ್ಯವಶ್ಯವಾಗಿದ್ದು ರೋಗಿ ಮತ್ತು ವೈದ್ಯರ ನಡುವೆ ಉತ್ತಮ ಬಾಂಧವ್ಯ ಒಡಮೂಡಬೇಕು. ಡಾ. ಬಿ.ಸಿ. ರಾಯ್ ಅವರ ಚಿಂತನೆ, ಮೌಲ್ಯಗಳನು ವೈದ್ಯರು ಅಳವಡಿಸಿಕೊಂಡು ರೋಗಿಗಳನ್ನು ಸಮಧಾನದಿಂದ ಕೌನ್ಸೆಲಿಂಗ್ ಮಾಡಿ ಗುಣಪಡಿಸಬೇಕು ಎಂದರು.

ರವಿ ಹುಚ್ಚಣ್ಣವರ ಉಪನ್ಯಾಸ ನೀಡಿದರು. ಈ ವೇಳೆ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಡಾ. ಪಿ.ಡಿ. ತೋಟದ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ಮಾಂತಶೆಟ್ಟರ, ಬಿ.ಡಿ. ದೊಡ್ಡಮನಿ, ಡಾ. ಎಸ್.ಸಿ ಮಲ್ಲಾಡದ, ಡಾ. ಎಸ್.ಬಿ. ಗುಡಗೇರಿ, ಡಾ. ಐ.ಎಸ್. ಮಳಗಿ, ಡಾ. ಎಸ್.ಕೆ. ಹೆಬ್ಬಳ್ಳಿ, ಡಾ. ಸುನೀಲ ಬುರಬುರೆ, ಡಾ. ಎಂ.ಆರ್. ಕಲಿವಾಳಮಠ, ಡಾ.ಪವನ ಮಹೇಂದ್ರಕರ, ಡಾ. ದೀಪಾ ಬಿಂಕದಕಟ್ಟಿ, ಡಾ. ನಾಗರಾಜ ವಾಲಿ. ಡಾ.ಪ್ರಸನ್ ಕುಲಕರ್ಣಿ, ಡಾ. ವಿಜದತ್ತ ಎಂ, ಡಾ. ಎ.ಎಂ. ಅಮರ ಶೆಟ್ಟರ ಇತರರು ಪಾಲ್ಗೊಂಡಿದ್ದರು. ಬಳಿಕ ಅಡವಿಸೋಮಾಪುರ ಜಾನಪದ ಕಲಾವಿದರು ಮತ್ತು ವೈದ್ಯರ ಕುಟುಂಬ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಡಾ. ಶರಣಪ್ಪ ಬಿಂಕದಕಟ್ಟಿ, ಡಾ. ವಿನೋದ ಹೊನ್ನಿಕೊಪ್ಪ, ಡಾ. ಸಂಜೀವ ಬಿರಾದಾರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net