ಭಾರತದ ಸಂಸ್ಕೃತಿ ಪಸರಿಸಿದ ವಿಶ್ವಮಾನ್ಯ ದಾರ್ಶನಿಕ

07krp-01
ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಚ್.ಟಿ. ಮಂಜು ಮಾತನಾಡಿದರು. ಸುಷ್ಮಾ, ಪಂಕಜಾ, ಜಗದೀಶ್, ಜಯರಂಗ, ಪೂರ್ಣಚಂದ್ರ ಇತರರಿದ್ದರು.
Published on

ಕೆ.ಆರ್.ಪೇಟೆ: ಭಾರತದ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಮಾಯಣದಂತಹ ಮೇರುಕೃತಿ ರಚಿಸಿದ ಮಹರ್ಷಿ ವಾಲ್ಮೀಕಿ ವಿಶ್ವಮಾನ್ಯ ದಾರ್ಶನಿಕರು ಎಂದು ಶಾಸಕ ಎಚ್.ಟಿ. ಮಂಜು ಬಣ್ಣಿಸಿದರು.

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಮಾಯಣದ ಮೂಲಕ ರಾಜಧರ್ಮ, ನೀತಿಶಾಸ್ತ್ರವನ್ನು ಜಗತ್ತಿಗೆ ಬೋಧಿಸಿದ ವಾಲ್ಮೀಕಿ ಮಹರ್ಷಿಯು ಪ್ರಾತಃ ಸ್ಮರಣೀಯರಾಗಿದ್ದಾರೆ. 24 ಸಾವಿರ ಶ್ಲೋಕಗಳನ್ನು ಒಳಗೊಂಡ ರಾಮಾಯಣ ಮಹಾಕಾವ್ಯ ಬರೆದು ಆದಿಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.

ಮಹರ್ಷಿ ವಾಲ್ಮೀಕಿಯ ಜೀವನದಲ್ಲಿ ಮಹತ್ವದ ತಿರುವು ಪಡೆದ ಘಟನೆಗಳನ್ನು ತಿಳಿಸಿರುವುದರ ಮೂಲಕ ಸತತ ಪರಿಶ್ರಮದಿಂದ ಭಗವಂತನ ಕರುಣೆ ಪಡೆದು ಶ್ರೀ ರಾಮಾಯಣ ಮಹಾಕಾವ್ಯ ರಚಿಸಿ ಭಾರತೀಯರ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದರು.

ಇದೇ ಗ್ರಂಥವನ್ನು ಆಧಾರವಾಗಿಟ್ಟುಕೊಂಡು ರಾಷ್ಟ್ರಕವಿ ಕುವೆಂಪು ಕನ್ನಡ ಭಾಷೆಯಲ್ಲಿ 22,284 ಸಾಲುಗಳನ್ನು ಒಳಗೊಂಡ ಶ್ರೀರಾಮಾಯಣ ದರ್ಶನಂ ಕೃತಿ ರಚಿಸಿದ್ದಾರೆ ಎಂದು ತಿಳಿಸಿದರು.

ರಾಮಾಯಣ ಮಹಾಕಾವ್ಯದಲ್ಲಿ ಭಾರತದ ಮಾದರಿ ಸಂಸ್ಕೃತಿ, ಸಂಸ್ಕಾರ, ರೀತಿ ನೀತಿ, ಆಚಾರ, ವಿಚಾರ, ಉಡುಗೆ ತೊಡುಗೆಗಳನ್ನು ಪ್ರಪಂಚಕ್ಕೆ ಪರಿಚಯಿಸಲಾಗಿದೆ. ಮಹಾನ್ ದರ್ಶನಿಕರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು, ಅವರಂತೆ ಬಾಳಲು ಪ್ರಯತ್ನ ಪಡಬೇಕು ಎಂದರು.

ಭಾರತದ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಮಾಯಣದಂತಹ ಮೇರುಕೃತಿಯನ್ನು ರಚಿಸಿದ ಮಹರ್ಷಿ ವಾಲ್ಮೀಕಿ ವಿಶ್ವಮಾನ್ಯ ದಾರ್ಶನಿಕರಾಗಿದ್ದಾರೆ. ರಾಮಾಯಣದ ಮೂಲಕ ರಾಜಧರ್ಮ, ನೀತಿಶಾಸ್ತ್ರವನ್ನು ಜಗತ್ತಿಗೆ ಬೋಧಿಸಿದ ವಾಲ್ಮೀಕಿ ಮಹರ್ಷಿಯು ಸ್ಮರಣೀಯರು ಎಂದರು.

ತಾಪಂ ಇಒ ಸುಷ್ಮಾ, ಪುರಸಭೆ ಅಧ್ಯಕ್ಷೆ ಪಂಕಜಾ, ಮುಖಂಡರಾದ ಜಗದೀಶ್, ಜಯರಂಗ, ಕಸಪಾ ತಾಲೂಕು ಅಧ್ಯಕ್ಷ ಪೂರ್ಣಚಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net