

ಬೆಂಗಳೂರು: ಇಂದಿನ ಜಗತ್ತು ತಾತ್ಕಾಲಿಕ ಮನರಂಜನೆಯ ಕಡೆ ಸಾಗುತ್ತಿದ್ದು, ಜಾಗತೀಕರಣದ ಮೇಲೆ ಪ್ರಭಾವ ಬೀರುತ್ತಿದೆ. ಇದರ ತಡೆಗೆ ಮರು ಚಿಂತನೆ ಹಾಗೂ ಮೌಲ್ಯವಾಪನಗಳು ನಿರಂತರವಾಗಿ ನಡೆಯಬೇಕಿದೆ. ಆಗ ವಾತ್ರ ಸಾಹಿತ್ಯ ಮತ್ತು ಸಾಂಸ್ಕೃತಿಕ ಜೀವಂತಿಕೆಯನ್ನು ಕಾಪಾಡಲು ಸಾಧ್ಯ ಎಂದು ಶ್ರೀ ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿ ಹೇಳಿದ್ದಾರೆ.
ನಗರದ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದಲ್ಲಿ ಡಾ.ಎಸ್.ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಬಿ.ನಂಜುಂಡಸ್ವಾಮಿ ಅವರಿಗೆ ವಿದ್ಯಾಶಂಕರ ಪ್ರಶಸ್ತಿ ಹಾಗೂ ಡಾ.ಸಫ್ರಾಜ್ ಚಂದ್ರಗುತ್ತಿ ಅವರಿಗೆ ವಿದ್ಯಾಶಂಕರ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು. ನಾಡಿನ ಏಳಿಗೆಗೆ ಕೊಡುಗೆ ನೀಡಿ ಅಗಲಿರುವ ಮಹಾನೀಯರ ಸ್ಥಾನ ತುಂಬುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ಡಾ.ಎಸ್. ವಿದ್ಯಾಶಂಕರ ಅವರು ಸತ್ವದ ದೃಷ್ಟಿಯಿಂದಲೂ ಶ್ರೇಷ್ಠ ಕೃತಿಗಳನ್ನು ರಚಿಸಿ ಕೊಟ್ಟಿದ್ದು ವಿದ್ವತ್ ಶಿಖರವಾಗಿ ಉಳಿದಿದ್ದಾರೆ. ತಮ್ಮ ಸಮಯವನ್ನು ವ್ಯರ್ಥ ವಾಡದೆ ಅತ್ಯಂತ ಕ್ರಿಯಾಶೀಲತೆಯೊಂದಿಗೆ ಕೃತಿಗಳನ್ನು ರಚಿಸಿದ್ದಾರೆ. ಅವರು ಇನ್ನಷ್ಟು ಕಾಲ ಬದುಕಿದ್ದರೆ ಇನ್ನೂ ಅನೇಕ ಮೌಲಿಕ ಕೃತಿಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ವಿದ್ವತ್ ಪರಂಪರೆ ಕುಗ್ಗುತ್ತಿರುವುದು ಕಣ್ಣಿಗೆ ಕಾಣುತ್ತಿದೆ. ಇದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಾಗಿದೆ. ಸಾಂಸ್ಕೃತಿಕ ಜೀವನ ಕಾಪಾಡಿಕೊಂಡು ಹೋಗುವ ಕೆಲಸ ಅಯಾ ಸಮುದಾಯಗಳು ಮಾಡಬೇಕಿದೆ ಎಂದು ಎಚ್ಚರಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರವಶಿವಮೂರ್ತಿ ಮಾತನಾಡಿ, ಡಾ.ಎಸ್. ವಿದ್ಯಾಶಂಕರ ಅವರು ಕನ್ನಡದ ಮಹತ್ವದ ವಿದ್ವಾಂಸರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ಬೆಳೆಸುವುದರ ಜತೆಗೆ ಅವರಿಗೆ ಸಂಶೋಧನಾ ಮಾರ್ಗದರ್ಶಕರಾಗಿದ್ದರು ಎಂದರು.
ಹಿರಿಯ ಸಂಶೋಧಕ ಡಾ.ಎಂ.ಜಿ.ನಾಗರಾಜ್, ಪ್ರಾಧ್ಯಾಪಕರಾದ ಡಾ.ಸಿ.ನಾಗಭೂಷಣ, ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, ಡಾ.ಎಸ್.ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.