

ವಿಜಯಪುರ : ಇಲ್ಲಿನ ಅಥಣಿ ರಸ್ತೆಯ ಸುಭಾಷಚಂದ್ರ ವೃತ್ತದ ಬಳಿಯ ಶ್ರೀ ಸಾಯಿ ಗಾರ್ಡನ್ನಲ್ಲಿ ಡಿ. 21 ರಿಂದ 29 ರವರಗೆ ಒತ್ತಡಮುಕ್ತ ಜೀವನಕ್ಕಾಗಿ ಒಂಬತ್ತು ದಿನ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಈ ಕಾರ್ಯಾಗಾರ ಆಯೋಜಿಸಲಾಗಿದ್ದು, ಇಂದೋರ್ನ ಖ್ಯಾತ ಒತ್ತಡ ಪರಿಹಾರ ತಜ್ಞೆ ರಾಜಯೋಗಿನಿ ಬಿ.ಕೆ.ಪೂನಮ್ ಜೀ ಮಾರ್ಗದರ್ಶನ ನೀಡಲಿದ್ದಾರೆ. ಪ್ರತಿದಿನ ಬೆಳಗ್ಗೆ 6.30 ರಿಂದ 8 ರವರೆಗೆ ಮತ್ತು ಸಂಜೆ 6.30 ರಿಂದ 8 ರವರೆಗೆ ನಡೆಯಲಿದೆ.
ಶಿಬಿರದಲ್ಲಿ ಚಿಂತೆಮುಕ್ತ ಜೀವನ ಶೈಲಿ, ಬನ್ನಿ ಸಂತೋಷದಿಂದ ಆನಂದಿಸೋಣ, ನನ್ನ ಯಥಾರ್ಥ ಪರಿಚಯ (ಆತ್ಮಜ್ಞಾನ), ಆಳವಾದ ಈಶ್ವರಿಯ ಅನುಭೂತಿ (ಆನಂದ ಉತ್ಸವ) ಹೀಗೆ ಪ್ರತಿ ದಿನವೂ ಒಂದೊಂದು ವಿಷಯದ ಕುರಿತು ಮಾರ್ಗದರ್ಶನ ನೀಡಲಾಗುವುದು. ಆಸಕ್ತರು ಉಚಿತ ನೋಂದಣಿಗಾಗಿ ಮೊ. 8618874607, 9448232404 ಮತ್ತು 9481004044ಕ್ಕೆ ಸಂಪರ್ಕಿಸುವಂತೆ ಕೋರಲಾಗಿದೆ.