ಸಮಾಜಕ್ಕಾಗಿ ಬದುಕು ಮೀಸಲಿಟ್ಟ ಕಾಯಕಯೋಗಿ

KKR SHIVAKUMARA
Published on

ಹಿರೇಕೆರೂರ: ಶಿವಕುಮಾರ ಮಹಾಸ್ವಾಮಿಗಳು ಈ ಭಾರತ ಕಂಡ ಆಧ್ಯಾತ್ಮಿಕ ಮಹಾ ಗುರುಗಳು, ಕರ್ನಾಟಕದ ಸಿದ್ಧಗಂಗಾ ಮಠದ ಪೀಠಾಧಿಪತಿಗಳಾಗಿ 112 ವರ್ಷಗಳ ಕಾಲ ಬದುಕಿ ಅನ್ನ, ಅಕ್ಷರ ಮತ್ತು ಜ್ಞಾನ ಇವುಗಳನ್ನು ಈ ನಾಡಿಗೆ ನಿರಂತರವಾಗಿ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸಿಇಎಸ್ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.

ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಸಂಸ್ಥೆಯ ವಿವಿಧ ಶಾಲಾ ಕಾಲೇಜ್ ಮತ್ತು ಟಿಎಪಿಎಂಎಸ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಕರ್ನಾಟಕರತ್ನ ಶಿವಕುಮಾರ ಮಹಾಸ್ವಾಮಿಗಳವರ 118ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. </p><p>ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅನಾಥರ ಪಾಲಿನ ಆಶಾಕಿರಣ. 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಅನುಯಾಯಿಯಾಗಿದ್ದ ಶ್ರೀಗಳು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಊಟ, ವಸತಿ ನೀಡಿ, ಜ್ಞಾನವನ್ನು ಧಾರೆ ಎರೆದ ಈ ಮಹಾಸ್ವಾಮಿಗಳು. ಯಾವುದೇ ಜಾತಿ, ಮತ, ಪಂಥಗಳಿಲ್ಲದೆ ಎಲ್ಲವನ್ನೂ ಮಾನವೀಯತೆ ದೃಷ್ಟಿಯಿಂದ ಸಮಾಜದ ಏಳಿಗೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟ ಕಾಯಕಯೋಗಿಗಳಾಗಿದ್ದರು ಎಂದರು.

ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ ಮಾತನಾಡಿ, ಲಕ್ಷಾಂತರ ವಿದ್ಯಾರ್ಥಿಗಳ, ದೀನ-ದಲಿತರ ಹಸಿವು ನೀಗಿಸಿದ ಶಿವಕುಮಾರ ಸ್ವಾಮೀಜಿ, ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿ ನಡೆದಾಡುವ ದೇವರಂತೆ ಅನ್ನ, ಅಧ್ಯಾತ್ಮ, ಜ್ಞಾನವೆಂಬ ತ್ರಿವಿಧ ದಾಸೋಹದಿಂದ ಜಗತ್ತಿಗೆ ಮಾದರಿಯಾದ ಶತಮಾನದ ಸಂತರು ಎಂದರು.

ಡಾ.ಎಸ್.ಬಿ. ಚನ್ನಗೌಡ್ರ ನುಡಿನಮನ ಸಮರ್ಪಿಸಿದರು. ಸಂಸ್ಥೆಯ ನಿರ್ದೇಶಕರಾದ ಏಕೇಶಣ್ಣ ಬಣಕಾರ, ಯು.ಎಸ್. ಕಳಗೊಂಡದ, ಸಂಶೋಧನಾ ವಿಭಾಗದ ನಿರ್ದೇಶಕ ರಜಿತ್​ಕುಮಾರ್ ಎಚ್.ಬಿ., ಪ್ರಾಂಶುಪಾಲರಾದ ಬಿ.ಪಿ. ಹಳ್ಳೇರ, ಕೆ.ಎಚ್. ಮಾವೀನತೋಪ, ಮುಖ್ಯಶಿಕ್ಷಕರಾದ ಆರ್.ಎಚ್. ಬೆಟ್ಟಳ್ಳೇರ, ಆರ್.ಎಚ್. ಪೂಜಾರ, ಟಿಎಪಿಸಿಎಂಎಸ್ ಪ್ರಧಾನ ವ್ಯವಸ್ಥಾಪಕ ಬಿ.ಜಿ. ಬಣಕಾರ, ರೇಖಾ ನಲವಾಲದ, ಸುನಿತಾ, ಪಿ.ಎಂ. ಡಮ್ಮಳ್ಳಿ, ರಮೇಶ ಮೆಣಸಗಿ, ಪಿ.ಪಿ. ಕಾಂಬಳೆ, ಎಸ್.ಬಿ. ಪಾಟೀಲ ಹಿರೇಮಠ ಹಾಗೂ ಬಿ.ಎಡಿ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

ಡಾ.ಸತೀಶ ಬಣಕಾರ ಹಾಗೂ ದಾನೇಶ ಟಿ., ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net