ಮಾಲೀಕನ ಮನೆಯಲ್ಲಿ ಬ್ರಾಸ್‌ಲೈಟ್ ಕದ್ದ ಕೆಲಸಗಾರ

jyp rrr
Published on

ಜಯಪುರ: ಹೇರೂರು ಗ್ರಾಪಂ ಕಿಬ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕದ್ದು ಮುಚ್ಚಿಟ್ಟಿದ್ದ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಶಿವಮೊಗ್ಗ ಜಿಲ್ಲೆ ಕುಂಸಿ ರವಿ ಎಂಬಾತ ಚಿನ್ನದ ಬ್ರಾಸ್‌ಲೈಟ್ ಕಳವು ಮಾಡಿದ ಆರೋಪಿ. ಕಿಬ್ಳಿ ತಿಮ್ಮಪ್ಪ ಗೌಡ ಎಂಬುವವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ರವಿ, ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನದ ಬ್ರಾಸ್‌ಲೈಟ್ ಕಳವು ಮಾಡಿದ್ದ. ಆರೋಪಿಯ ನಡತೆಯಿಂದ ಅನುಮಾನಗೊಂಡ ತಿಮ್ಮಪ್ಪಗೌಡ, ಬಾಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರ ರಾತ್ರಿಯೇ ಕಾರ್ಯಪ್ರವೃತ್ತರಾದ ಬಾಳೆಹೊನ್ನೂರು ಪಿಎಸ್‌ಐ ರವೀಶ್ ಹಾಗೂ ಕ್ರೈಂ ಎಎಸ್‌ಐ ಅಭಿಷೇಕ್ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಾಲೀಕರ ಮನೆಯ ಹಿಂಭಾಗದ ಕೊಟ್ಟಿಗೆಯ ಇಟ್ಟಿಗೆಗಳ ನಡುವೆ ಚಿನ್ನದ ಬ್ರಾಸ್‌ಲೈಟ್ ಇಟ್ಟಿರುವುದಾಗಿ ತಿಳಿಸಿದ. ಪೊಲೀಸರು ಚಿನ್ನಾಭರಣ ವಶಪಡಿಸಿಕೊಂಡರು. ಆರೋಪಿಯನ್ನು ತಹಸೀಲ್ದಾರ್ ಮುಂದೆ ಹಾಜರುಪಡಿಸಿದರು. ಸಿಬ್ಬಂದಿ ಶಂಕರ್ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net