ಗಣೇಶನ ಹೆಸರು ಇಟ್ಟಕೊಂಡಿದ್ದವರಿಗೆ ಸಿಗುತ್ತೆ ವಂಡರ್ ಲಾಗೆ ಉಚಿತ ಪಾಸ್​! ಇದು ಗಣೇಶ ಹಬ್ಬದ​​ ಗಿಫ್ಟ್​

wondre la
Published on

ಬೆಂಗಳೂರು: ಕರೊನಾ ನಡುವೆಯೂ ಗೌರಿ-ಗಣೇಶ ಹಬ್ಬದ ಸಡಗರ ನಾಡಿನಾದ್ಯಂತ ಕಳೆಗಟ್ಟಿದೆ. ಇದೇ ಸುಸಂದರ್ಭಕ್ಕೆ ಬಿಡದಿ ಬಳಿಯಿರುವ ವಂಡರ್​ ಲಾ ಅಮ್ಯೂಸ್​ಮೆಂಟ್​ ಪಾರ್ಕ್​ ವಿಶೇಷ ಕೊಡುಗೆ ನೀಡಿದೆ. ಗಣೇಶನ ಹೆಸರನ್ನು ಯಾರು ಇಟ್ಟುಕೊಂಡಿದ್ದಾರೋ ಅವರಿಗೆ ಮಾತ್ರವೇ ಈ ಬಂಫರ್​ ಕೊಡುಗೆ.

ಭಗವಾನ್ ಶ್ರೀ ಗಣೇಶನ 108 ಹೆಸರುಗಳ ಪೈಕಿ ಯಾವುದೇ ಹೆಸರನ್ನು ನೀವು ಇಟ್ಟುಕೊಂಡಿದ್ದೀರಾ? ಹಾಗಿದ್ರೆ ನಿಮ್ಗೆ ಸಿಗಲಿದೆ ವಂಡರ್ ಲಾಗೆ ಉಚಿತ ಪ್ರವೇಶ. ಹೌದು, ಗಣೇಶನ ವಿವಿಧ ಹೆಸರು ಹೊಂದಿರುವ ಜನರು ವಂಡರ್‌ಲಾಗೆ ಸೆಪ್ಟೆಂಬರ್ 10ರ ಗಣೇಶ ಹಬ್ಬದಂದು ನೇರವಾಗಿ ವಂಡರ್ ಲಾಗೆ ಭೇಟಿ ನೀಡಿ ಉಚಿತ ಪಾಸ್ ಪಡೆಯಬಹುದು.

ಈ ಕೊಡುಗೆ ಪಡೆಯಲು ಅರ್ಹರಾಗಿರುವವರು ನಿಮ್ಮ ಹೆಸರನ್ನು ಸೂಚಿಸುವ ಯಾವುದಾದರು ಗುರುತಿನ ಚೀಟಿ ತರುವುದು ಕಡ್ಡಾಯ. 100 ಮಂದಿಗೆ ಉಚಿತ ಪಾಸ್ ನೀಡಲು ನಿರ್ಧರಿಸಿದ್ದು, ಮೊದಲು ಬಂದವರಿಗೆ ಆದ್ಯತೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ದೂರವಾಣಿ ಸಂಖ್ಯೆ 080-37230333, 080-35073966.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net