ಗಾಂಜಾ ಮಾರುತ್ತಿದ್ದ ಮಹಿಳೆಗೆ ಜೈಲು ಶಿಕ್ಷೆ

COURT
Published on

ನರಗುಂದ: ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಗೆ ಸ್ಥಳೀಯ ಜೆಎಂಎಫ್​ಸಿ ನ್ಯಾಯಾಲಯವು 10 ಸಾವಿರ ರೂಪಾಯಿ ದಂಡ, 8 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತಾಲೂಕಿನ ಶಿರೋಳ ಗ್ರಾಮದ ಸರೋಜಾ ವೆಂಕನಗೌಡ ಕರಬಸನಗೌಡ್ರ (41) ಶಿಕ್ಷೆಗೆ ಗುರಿಯಾದ ಮಹಿಳೆ. ಶಿರೋಳದ ಆಶ್ರಯ ಕಾಲನಿ ನಿವಾಸಿ ಸರೋಜಾ, 2017ರಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಳು.

ಖಚಿತ ಮಾಹಿತಿ ಮೇರೆಗೆ ಅಂದಿನ ಪಿಎಸ್​ಐ ಎಚ್.ಬಿ. ತಳವಾರ ದಾಳಿ ನಡೆಸಿ ಸರೋಜಾ ಬಳಿಯಿದ್ದ 1500 ರೂಪಾಯಿ ಮೌಲ್ಯದ 200 ಗ್ರಾಂ. ಗಾಂಜಾ ವಶಪಡಿಸಿಕೊಂಡು ಎನ್​ಡಿಪಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಸಿಪಿಐ ಗಿರೀಶ ರೋಡಕರ ತನಿಖೆ ಕೈಗೊಂಡು ಪಟ್ಟಣದ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಅಂತಿಮ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅ.7ರಂದು ಜೆಎಂಎಫ್​ಸಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಜಿನ್ನಪ್ಪ ಚೌಗಲಾ ಅವರು ಅಪರಾಧಿಗೆ 10 ಸಾವಿರ ರೂ. ದಂಡ ಹಾಗೂ 10 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಜಗತ್ತನಾಯಕ ಕಣವಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net