ಮೈಸೂರಿನಲ್ಲಿ ಸಾಲಕ್ಕೆ ಅಂಜಿ ಲೇಡಿಸ್ ಪಿಜಿ ನಡೆಸುತ್ತಿದ್ದ ಮಹಿಳೆ ಆತ್ಮಹತ್ಯೆ

Crime Logo
Published on

ಮೈಸೂರು:ಸಾಲಗಾರರ ಕಾಟಕ್ಕೆ ಬೇಸತ್ತು ಲೇಡಿಸ್ ಪಿಜಿ ನಡೆಸುತ್ತಿದ್ದ ಮಹಿಳೆ ಡೆತ್‌ನೋಟ್ ಬರೆದಿಟ್ಟು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯ ನಗರದ ರೈಲ್ವೆ ಬಡಾವಣೆ ನಿವಾಸಿ ಜಯಶ್ರೀ(51) ವಿಷ ಸೇವಿಸಿ ಮೃತಪಟ್ಟವರು.

‘ನಾನು ನನ್ನ ಮಕ್ಕಳಿಗೆ ಒಳ್ಳೆ ತಾಯಿ ಆಗಲಿಲ್ಲ, ಸಾಲದ ತಾಯಿ ಆದೆ, ಸಾಲಗಾರರಿಗೆ ಬಡ್ಡಿ ತಿನಿಸಿದ್ದೇನೆ, ಸಾಲಗಾರರು ಪಿಜಿ ಮುಂದೆ ಬಂದು ಮರ್ಯಾದೆ ತೆಗೆದಿದ್ದಾರೆ. ಸಾಲ ತೀರಿಸದಿದ್ದಲ್ಲಿ ಸಾಯುವುದೇ ಲೇಸು ಎಂದು ಕಿರುಚಾಡಿದ್ದಾರೆ.

ವಿಜಯನಗರ ನಿವಾಸಿಗಳಾದ ಸಾವಿತ್ರಿ, ಸುಕನ್ಯಾ, ಪ್ರೇಮಾ, ದೇವಮ್ಮ, ಸಾಕಮ್ಮ, ಪುಷ್ಪಲತಾ, ಪುಷ್ಪಾ, ಸುಮಾ, ಶೋಭಾ, ವಿಜಯ, ಫೈನಾನ್ಸ್ ಮಾಲೀಕ ಪ್ರದೀಪ್ ಹಾಗೂ ಕುಮಾರ್ ಎಂಬುವರು ಸಾಲ ನೀಡಬೇಕು ಎಂದು ಕಿರುಕುಳ ನೀಡುತ್ತಿದ್ದರು’ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಈ ಸಂಬಂಧ ಮೃತರ ಪುತ್ರ ಭರತ್, ದೂರು ನೀಡಿದ್ದು, ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net