ಗಾಂಜಾ ಬೆಳೆದಿದ್ದ ಮಹಿಳೆ ಬಂಧನ

Arrest
Published on

ಮಹದೇಶ್ವರಬೆಟ್ಟ : ಹನೂರು ತಾಲೂಕಿನ ಗಡಿಗ್ರಾಮ ಪಾಲಾರ್‌ನಲ್ಲಿ ಮನೆಯ ಹಿತ್ತಲಿನ ಜಾಗದಲ್ಲಿ ಗಾಂಜಾ ಬೆಳೆದಿದ್ದ ಮಹಿಳೆಯನ್ನು ಗುರುವಾರ ರಾತ್ರಿ ಮಹದೇಶ್ವರಬೆಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ಲಕ್ಷ್ಮೀ (55) ಬಂಧಿತ ಆರೋಪಿ. ಈಕೆ ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ನಂಜುಂಡಸ್ವಾಮಿ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿ ಪರಿಶೀಲಿಸಿದಾಗ ಗಾಂಜಾ ಬೆಳೆದಿರುವುದು ದೃಢಪಟ್ಟಿದೆ. 3 ಕೆಜಿ, 650 ಗ್ರಾಂ ತೂಕವುಳ್ಳ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಸಂಬಂಧ ಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ವೈದ್ಯರಾದ ಡಾ.ಜಾಹ್ನವಿ, ಪೊಲೀಸ್ ಸಿಬ್ಬಂದಿ ಜಯರಾಮ್, ಚಂದ್ರು, ರವಿ ಹಾಗೂ ಮೋಹನ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net