ವಿಜಯವಾಣಿ ಸುದ್ದಿಜಾಲ ನಾಗಮಂಗಲ
ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ತೊಳಲಿ ಗ್ರಾಮದ ಕೆರೆ ಸಮೀಪ ಶುಕ್ರವಾರ ತಡರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭದ್ರಿಕೊಪ್ಪಲು ಗ್ರಾಮದ ತಿಮ್ಮೇಗೌಡ ಅವರ ಮಗಳು ಯಶೋಧಮ್ಮ(45) ಮೃತ. ಮಾನಸಿಕ ಅಸ್ವಸ್ಥೆಯಾದ ಯಶೋಧಮ್ಮ ಅಚಾನಕವಾಗಿ ರಾಷ್ಟ್ರೀಯ ಹೆದ್ದಾರಿಗೆ ಬಂದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಮೃತದೇಹದ ಮೇಲೆ ಮತ್ತೊಂದು ವಾಹನ ಹರಿದಿರುವ ಹಿನ್ನೆಲೆಯಲ್ಲಿ ಗುರುತು ಹಿಡಿಯಲಾಗದಷ್ಟು ದೇಹ ಛಿದ್ರವಾಗಿತ್ತು. ತಾಲೂಕಿನ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.