ಒಂಟಿಯಾಗಿ ಹೊಲಗದ್ದೆಗೆ ತೆರಳದಿರಿ

mkg
Published on

ನ್ಯಾಮತಿ: ಶಿವಮೊಗ್ಗ ಗ್ರಾಮಾಂತರ ವಿಭಾಗದ ಶಂಕರ ಅರಣ್ಯ ವಲಯ ವ್ಯಾಪ್ತಿಯ ಬಿಕ್ಕೋನಹಳ್ಳಿ ಗ್ರಾಮದ ಹೊಲದಲ್ಲಿ ಮಂಗಳವಾರ ಚಿರತೆಯೊಂದು ಮಹಿಳೆಯನ್ನು ಬಲಿ ಪಡೆದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಒಂಟಿಯಾಗಿ ಹೊಲಗದ್ದೆಗೆ ತೆರಳದಿರಲು ಅರಣ್ಯಾಧಿಕಾರಿ ಚೇತನ್ ಕೆ.ಆರ್. ಮನವಿ ಮಾಡಿದರು.

ಅರಣ್ಯ ವಲಯದ ತಾಲೂಕಿನ ಸೋಗಿಲು, ಚಟ್ನಹಳ್ಳಿ, ಯರಮಡ ಕ್ಯಾಂಪ್, ಮುಸ್ಸೇನಾಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರನ್ನು ಭೇಟಿ ಮಾಡಿದ ಅವರು, ಚಿರತೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರು ಒಂಟಿಯಾಗಿ ತಮ್ಮ ಹೊಲ, ಜಮೀನು, ತೋಟಗಳು ಸೇರಿದಂತೆ ಇತರೆ ಕೆಲಸಗಳಿಗೆ ಹೋಗಬಾರದು. ಚಿರತೆ ಸೆರೆಯಾಗುವವರೆಗೂ ಯಾರೂ ಅನಾವಶ್ಯಕವಾಗಿ ಓಡಾಡಬಾರದು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net