

ಮುಂಡಗೋಡ: ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದ ಮನೆಯ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ.
ತಾಲೂಕಿನ ಕಲಕೇರಿ ಹೊನ್ನಿಕೊಪ್ಪ ಗ್ರಾಮದ ಸಾತವ್ವ ಬೆಂಗಳೂರ (50) ಗಾಯಗೊಂಡ ಮಹಿಳೆ.
ಪಕ್ಕದಲ್ಲಿರುವ ಹಟೇಲ್ಸಾಬ ಅತ್ತಾರ್ ಎಂಬುವರಿಗೆ ಸೇರಿದ ಮನೆಯ ಗೋಡೆ ಬುಧವಾರ ನಸುಕಿನ ಜಾವ ಕುಸಿದು ಪಕ್ಕದ ಮನೆಯ ಮೇಲೆ ಬಿದ್ದಿದೆ. ಪರಿಣಾಮ ಪಕ್ಕದ ಮನೆಯ ಸಾತವ್ವ ಎಂಬವರು ತೀವ್ರವಾಗಿ ಗಾಯಗೊಂಡಿದ್ದರು. ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ.