ಹೆಣ್ಣು ಅಬಲೆಯಲ್ಲ ಸಬಲೆ

19dvk 2
Published on

ಬೆಳಗಾವಿ: ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಪ್ರತಿಯೊಂದು ೇತ್ರದಲ್ಲೂ ಅವಿರತವಾಗಿ ದುಡಿದು ತಾನು ಅಬಲೆಯಲ್ಲ, ಸಬಲೆ ಮತ್ತು ಪ್ರಬಲೆ ಎಂದು ತೋರಿಸಿಕೊಟ್ಟಿದ್ದಾಳೆ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

ಶಿವಬಸವ ನಗರ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ 290ನೇ ಶಿವಾನುಭವ ಹಾಗೂ ಶ್ರಾವಣ ಮಾಸದ ಕೊನೆಯ ಸೋಮವಾರ ಪ್ರಯುಕ್ತ ಏರ್ಪಡಿಸಿದ್ದ ಮಹಿಳಾ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಾಗತೀಕರಣದಿಂದ ಲಿಂಗಭೇದ ಕಡಿಮೆಯಾಗಿದ್ದು, ಪುರುಷರಂತೆ ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ರಾಜಕೀಯದಂಥ ಮಹತ್ವದ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ ಎಂದರು.

ಡಾ.ಅಶ್ವಿನಿ ಭಾಗೋಜಿ ಮಹಿಳೆ ಅಬಲೆಯಲ್ಲ&ಸಬಲೆ ವಿಷಯವಾಗಿ ಮಾತನಾಡಿದರು.ಡಾ.ಗುರುದೇವಿ ಹುಲೆಪ್ಪನವರಮಠ ಮತ್ತು ಮಧುಮತಿ ಹಿರೇಮಠ, ಮಹಿಳಾ ಸಬಲೀಕರಣದ ಪರಿಣಾಮಗಳ ಕುರಿತು ಮಾತನಾಡಿದರು. ಹಿರಿಯರಾದ ರಾಜೇಶ್ವರಿ ಸಂಬರಗಿಮಠರ ಅಮೃತ ಮಹೋತ್ಸವ ಆಚರಿಸಲಾಯಿತು. ಡಾ.ಗುರುದೇವಿ ಹುಲೆಪ್ಪನವರಮಠ ಮತ್ತು ಪ್ರೊ.ರಿಟಾ ಬಣಗಾರ ಇಂಗ್ಲಿಷ್​ಗೆ ಅನುವಾದಿಸಿದ ಕಾರುಣ್ಯದ ಕಾರಂಜಿ ಕೃತಿ ಬಿಡುಗಡೆಗೊಳಿಸಲಾಯಿತು. ನಯನಾ ಗಿರಿಗೌಡರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net