ಮಹಿಳೆ ಅಬಲೆಯಲ್ಲ ಸಬಲೆ

8RAM3
Published on

A woman is not helpless, she is strong,

ರಾಮದುರ್ಗ: ಮಹಿಳೆ ಅಬಲೆಯಲ್ಲ ಸಬಲೆ. ಸರ್ಕಾರದ ವಿವಿಧ ಉನ್ನತ ಸ್ಥಾನಗಳಲ್ಲಿ ಮಹಿಳಾ ಉದ್ಯೋಗಿಗಳು ಕಡಿಮೆ ಇದ್ದು, ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆಯುವ ಮೂಲಕ ಪುರುಷರಿಗೆ ಸಮನಾಗಿ ನಿಲ್ಲಬೇಕು ಎಂದು ನಿವೃತ್ತ ಪ್ರಾಧ್ಯಾಪಕಿ ವಿಜಯಾ ಜೋಶಿ ಕರೆ ನೀಡಿದರು.

ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಸಿ.ಎಸ್. ಬೆಂಬಳಗಿ ಕಲಾ, ಶಾ.ಎಂ.ಆರ್.ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್.ರಾಠಿ ವಾಣಿಜ್ಯ ಮಹಾವಿದ್ಯಾಲಯ, ವಿದ್ಯಾರ್ಥಿನಿಯರ ಸಂಘ, ರೇಂಜರ್ಸ್ ಘಟಕ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಟಿ.ದಾಮೋದರ ಮಾತನಾಡಿದರು. ರೇಂಜರ್ಸ್ ಅಧಿಕಾರಿ ಮಂಜುಳಾ ಮೂಡ್ಲವರ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದರು. ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಹಾಗೂ ಇತ್ತೀಚೆಗೆ ಬೆಳಗಾವಿಯ ಅಂಗಡಿ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಐಕ್ಯೂಎಸಿ ಸಂಯೋಜಕ ಡಾ.ಎಚ್.ಪಿ.ಹಾಲೊಳ್ಳಿ, ಎಸ್. ಐ.ಮಳಗಲಿ, ಡಾ.ಬಿ.ಎಂ.ಜಬಡೆ, ಜಿ.ಡಿ.ರಾಥೋಡ, ಎ.ಜೆ.ಕದಂ, ಶ್ರೇಯಾ ಭಾಂವಿಹಾಳ, ವಿದ್ಯಾರ್ಥಿನಿಯ ಸಂಘದ ಪ್ರತಿನಿಧಿ ಸಂಜನಾ ಇತರರಿದ್ದರು.

ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ ಸ್ವಾಗತಿಸಿದರು. ಎಸ್.ಬಿ.ಆಲಗುಂಡಿ ಮತ್ತು ಎಂ.ಹೆಚ್.ಕುಲಕರ್ಣಿ ನಿರೂಪಿಸಿದರು. ಲಕ್ಷ್ಮೀ ಸುನದಾಳ ವಂದಿಸಿದರು.

ರಾಮದುರ್ಗ: ಮಹಿಳೆ ಅಬಲೆಯಲ್ಲ ಸಬಲೆ. ಸರ್ಕಾರದ ವಿವಿಧ ಉನ್ನತ ಸ್ಥಾನಗಳಲ್ಲಿ ಮಹಿಳಾ ಉದ್ಯೋಗಿಗಳು ಕಡಿಮೆ ಇದ್ದು, ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆಯುವ ಮೂಲಕ ಪುರುಷರಿಗೆ ಸಮನಾಗಿ ನಿಲ್ಲಬೇಕು ಎಂದು ನಿವೃತ್ತ ಪ್ರಾಧ್ಯಾಪಕಿ ವಿಜಯಾ ಜೋಶಿ ಕರೆ ನೀಡಿದರು. ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಸಿ.ಎಸ್. ಬೆಂಬಳಗಿ ಕಲಾ, ಶಾ.ಎಂ.ಆರ್.ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್.ರಾಠಿ ವಾಣಿಜ್ಯ ಮಹಾವಿದ್ಯಾಲಯ, ವಿದ್ಯಾರ್ಥಿನಿಯರ ಸಂಘ, ರೇಂಜರ್ಸ್ ಘಟಕ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಟಿ.ದಾಮೋದರ ಮಾತನಾಡಿದರು. ರೇಂಜರ್ಸ್ ಅಧಿಕಾರಿ ಮಂಜುಳಾ ಮೂಡ್ಲವರ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದರು. ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಹಾಗೂ ಇತ್ತೀಚೆಗೆ ಬೆಳಗಾವಿಯ ಅಂಗಡಿ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಐಕ್ಯೂಎಸಿ ಸಂಯೋಜಕ ಡಾ.ಎಚ್.ಪಿ.ಹಾಲೊಳ್ಳಿ, ಎಸ್. ಐ.ಮಳಗಲಿ, ಡಾ.ಬಿ.ಎಂ.ಜಬಡೆ, ಜಿ.ಡಿ.ರಾಥೋಡ, ಎ.ಜೆ.ಕದಂ, ಶ್ರೇಯಾ ಭಾಂವಿಹಾಳ, ವಿದ್ಯಾರ್ಥಿನಿಯ ಸಂಘದ ಪ್ರತಿನಿಧಿ ಸಂಜನಾ ಇತರರಿದ್ದರು. ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ ಸ್ವಾಗತಿಸಿದರು. ಎಸ್.ಬಿ.ಆಲಗುಂಡಿ ಮತ್ತು ಎಂ.ಹೆಚ್.ಕುಲಕರ್ಣಿ ನಿರೂಪಿಸಿದರು. ಲಕ್ಷ್ಮೀ ಸುನದಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net