ಹೆಣ್ಣು ಹುಣ್ಣಲ್ಲ, ಬಾಳಿನ ಕಣ್ಣು

A woman is not a wound, she is the eye of life.
ಗೊಳಸಂಗಿಯ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಚಿಣ್ಣರ ಹಬ್ಬದ ಕುರಿತು ಚಿಮ್ಮಲಗಿ ಅರಳೆಲೆ ಕಟ್ಟಿಮನಿ ಹಿರೇಮಠದ ಸಿದ್ಧರೇಣುಕ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸಾಹಿತಿ ಸರಸ್ವತಿ ಚಿಮ್ಮಲಗಿ, ಗ್ರಾಪಂ ಅಧ್ಯಕ್ಷ ರಾವುತ ಸೀಮಿಕೇರಿ ಇತರರಿದ್ದರು.
Published on

ಗೊಳಸಂಗಿ: ಅದೊಂದು ಕಾಲವಿತ್ತು. ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿತೆಂದು. ಆದರೆ ಇಂದು ಕಾಲ ಬದಲಾಗಿದೆ. ಹಿಂದೆ ಹುಣ್ಣು ಎಂದು ಕರೆಸಿಕೊಂಡ ಹೆಣ್ಣು ಇಂದು ಕಣ್ಣಾಗಿ ಎಲ್ಲರ ಬಾಳಿಗೆ ಬೆಳಕಾಗಿ ಎಲ್ಲ ಕ್ಷೇತ್ರವನ್ನು ಬೆಳಗುವ ದೀವಿಗೆಯಾಗಿದ್ದಾಳೆ ಎಂದು ಸಾಹಿತಿ ಸರಸ್ವತಿ ಚಿಮ್ಮಲಗಿ ವಿಶ್ಲೇಷಿಸಿದರು.

ಗೊಲ್ಲಾಳೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.

ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ರಾಜ್ಯಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿಜಯಪುರ-ಬಾಗಲಕೋಟ ಜಿಲ್ಲೆಯಲ್ಲಿ ಸಂಗನಗೌಡ ಯಂಕಂಚಿ ಅವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದರು.

ಚಿಮ್ಮಲಗಿ ಅರಳೆಲೆ ಕಟ್ಟಿಮನಿ ಹಿರೇಮಠದ ಸಿದ್ಧರೇಣುಕ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗನಗೌಡ ಯಂಕಂಚಿ ಅಧ್ಯಕ್ಷತೆ ವಹಿಸಿದ್ದರು.ಸಲಹಾ ಸಮಿತಿ ಉಪಾಧ್ಯಕ್ಷ ಅಮರೇಶಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ರಾವುತ ಸೀಮಿಕೇರಿ, ಸುರೇಶ ದಳವಾಯಿ, ಎಸ್.ಎಸ್.ಅವರಾದಿ, ಪ್ರೇಮಕುಮಾರ ಮ್ಯಾಗೇರಿ, ಮಾರುತಿ ಪವಾರ, ಎನ್.ಎಸ್.ಹೂಗಾರ, ದೇವೇಂದ್ರ ಗೋನಾಳ, ಬಿ.ಎಸ್.ಮೇಟಿ, ಸುದೇಶ ಪರಮಗೊಂಡ, ಮಹಿಬೂಬ ಹತ್ತರಕಿಹಾಳ, ಸಂಗಪ್ಪ ಕೋಲಾರ, ದೇವೇಂದ್ರ ಬಳಮಕರ ಇದ್ದರು.

ಮುಖ್ಯ ಶಿಕ್ಷಕಿ ಸೂಫಿಯಾ ಎಂ.ಎಂ. ಸ್ವಾಗತಿಸಿದರು. ಶಿಕ್ಷಕಿ ಶಿಲ್ಪಾ ಪಾಟೀಲ ನಿರೂಪಿಸಿದರು. ಶಿಕ್ಷಕ ಆರ್. ಶ್ರೀಪತಿಗೌಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net