ಮಹಿಳೆ ದಾಸಿಯಲ್ಲ ಅದ್ಭುತ ಶಕ್ತಿ

20 Dwd 6
Published on

ಧಾರವಾಡ: ಹೆಣ್ಣು ಮಕ್ಕಳು ಅದೃಷ್ಟ. ಅವರನ್ನು ಶೋಷಣೆಗೆ ಗುರಿ ಮಾಡುವುದು ಅಕ್ಷಮ್ಯ ಅಪರಾಧ. ಮಹಿಳೆ ಸಾಸಿಯಲ್ಲ, ಆಕೆ ಅದ್ಭುತ ಶಕ್ತಿ ಎಂದು ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.
ನಗರದ ಪೂರ್ಣಾ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳೊಂದಿಗೆ ಆಪ್ತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಸವರಾಜ ಕಾಜಗಾರ ಮಾತನಾಡಿ, ಶ್ರೇಷ್ಠ ವ್ಯಕ್ತಿಗಳು ಚಿಕ್ಕ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಶ್ರೇಷ್ಠರಾಗುತ್ತಾರೆ. ಈ ದಿಶೆಯಲ್ಲಿ ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು ಎಂದರು.
ಪ್ರಾಚಾರ್ಯ ಡಾ. ಸಿ.ಸಿ. ಹಾದಿಮನಿ ಮಾತನಾಡಿ, ತಾಯಿ- ತಂದೆ ನಮ್ಮ ಮೊದಲ ಗುರುಗಳು. ನಮ್ಮ ಸಂಸ್ಕೃತಿ, ಆಚಾರ- ವಿಚಾರಗಳನ್ನು ಮರೆಯಬಾರದು ಎಂದರು.
೨೦೧೯ನೇ ಸಾಲಿನ ವಿದ್ಯಾರ್ಥಿನಿ ದೀಪಾ ನ್ಯಾಮತಿ ಮೊದಲ ವೇತನ ೫೧,೪೯೨ ರೂಪಾಯಿಯನ್ನು ಕಾಲೇಜಿಗೆ ದೇಣಿಗೆ ನೀಡಿದಳು.
ನಿರ್ದೇಶಕರಾದ ಮಹೇಶ ಕೋಲ್ಹಾರ, ಮಹಾಂತೇಶ ಹಂಚಗಿ, ಇತರರಿದ್ದರು. ಹೇಮಂತ ಎಸ್. ಕರ್ಜಗಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net