ಮಂಗಲ ಗ್ರಾಮದ ಮಹಿಳೆ ನಾಪತ್ತೆ

Oplus_131072
Published on

ಯಳಂದೂರು: ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದ ಮಹದೇವಮ್ಮ(40) ನಾಪತ್ತೆಯಾಗಿದ್ದಾರೆ. ಫೆ.20ರಂದು ಮಹದೇಶ್ವರ ಬೆಟ್ಟಕ್ಕೆ ಹೋಗಿ ಬರುವುದಾಗಿ ಮನೆಯಿಂದ ಮಹದೇವಮ್ಮ ಹೇಳಿ ಹೋದವರು ವಾಪಸ್ ಬಂದಿಲ್ಲ ಎಂದು ಸಂತೆಮರಹಳ್ಳಿ ಪೊಲೀಸ್ ಠಾಣೆಗೆ ಪುತ್ರಿ ರಾಧಿಕಾ ದೂರು ನೀಡಿದ್ದಾರೆ. ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, 5.5 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾಗುವ ವೇಳೆ ಕೇಸರಿ ಬಣ್ಣದ ಸೀರೆ ಹಾಕಿದ್ದರು. ಸುಳಿವು ಸಿಕ್ಕರೆ ಪೊಲೀಸ್ ಠಾಣೆ -08226-240250, ಪಿಎಸ್‌ಐ ಟಿ.ಎಂ. ತಾಜುದ್ದೀನ್ 9480804650 ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net