ಜನರ ಅಪಪ್ರಚಾರದ ಮಾತುಗಳಿಗೆ ನೊಂದು ಮಹಿಳೆ ಆತ್ಮಹತ್ಯೆ

sucide
ಸಾಂದರ್ಭಿಕ ಚಿತ್ರ
Published on

ಮೈಸೂರು: ಜನರ ಅಪಪ್ರಚಾರದ ಮಾತುಗಳಿಂದ ನೊಂದು ಮಹಿಳೆಯೊಬ್ಬರು ಗಾಂಧಿನಗರದ ಉದ್ಯಾನದಲ್ಲಿ ಶನಿವಾರ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಾಂಧಿ ನಗರ ನಿವಾಸಿ ಮಹದೇವಸ್ವಾಮಿ ಅವರ ಪತ್ನಿ ವಿಜಯಲಕ್ಷ್ಮೀ (40) ಆತ್ಮಹತ್ಯೆ ಮಾಡಿಕೊಂಡವರು. ವಿಜಯಲಕ್ಷ್ಮೀ ಅವರ ನಡೆಯ ಕುರಿತು ಕೆಲವರು ಅಪಪ್ರಚಾರ ಮಾಡಿದರು. ಇದು ಅವರ ಆತ್ಮಹತ್ಯೆಗೆ ಕಾರಣವಾಯಿತು ಎಂದು ಮೃತರ ಮೈದುನ ಮಂಜು ನೀಡಿದ ದೂರಿನ ಮೇರೆಗೆ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net