ರಸ್ತೆಗೆ ಅಡ್ಡಲಾಗಿ ನಿಂತ ಕಾಡಾನೆ

04 HANUR 3
ಹನೂರು ಎಲ್ಲೇಮಾಳ ಮಾರ್ಗದ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡಾನೆ.
Published on

ಹನೂರು: ಪಟ್ಟಣದಿಂದ ಎಲ್ಲೇಮಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಮಂಗಳವಾರ ಕಾಡಾನೆಯೊಂದು ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ವಾಹನ ಸವಾರರಲ್ಲಿ ಆತಂಕ ಉಂಟು ಮಾಡಿತು.

ಈ ಮಾರ್ಗವು ಮಲೆಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದ್ದು, ಅರಣ್ಯ ಪ್ರದೇಶದ ನಡುವೆ ಹಾದು ಹೋಗಿದೆ. ಈ ಮಾರ್ಗದ ಅರಣ್ಯ ಇಲಾಖೆಯ ಹಳೇ ನರ್ಸರಿ ಬಳಿಯ ತಿರುವಿನಲ್ಲಿ ಕಳೆದ ತಿಂಗಳು 2 ಬಾರಿ ಕಾಡಾನೆಗಳ ಹಿಂಡು ರಸ್ತೆಯನ್ನು ದಾಟಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಈ ವೇಳೆ ಸಾರ್ವಜನಿಕರು ಸಿಬ್ಬಂದಿ ನಿಯೋಜಿಸುವುದರ ಮೂಲಕ ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು.

ಆದರೆ ಯಾವುದೇ ಕ್ರಮವಾಗಿಲ್ಲದರ ಪರಿಣಾಮ ಇದೇ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಕಾಡಾನೆಯೊಂದು ರಸ್ತೆಗೆ ಅಡ್ಡಲಾಗಿ ನಿಂತಿದೆ. ಇದರಿಂದ ಭಕ್ತರು ಹಾಗೂ ಸಾರ್ವಜನಿಕರು ಕೆಲಕಾಲ ಆತಂಕಕ್ಕೆ ಒಳಗಾದರು. ಬಳಿಕ ಜನರ ಸದ್ದಿಗೆ ಕಾಡಿನತ್ತ ತೆರಳಿತು. ಸಾರ್ವಜನಿಕರು ನಿಟ್ಟುಸಿರು ಬಿಟ್ಟು ತೆರಳಿದ್ದು, ಇನ್ನೇನು ಮಹಾ ಶಿವರಾತ್ರಿ ಜಾತ್ರೆ ಸಮೀಪಿಸುತ್ತಿದೆ. ಈ ಮಾರ್ಗದಲ್ಲಿ ಮ.ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಆದರೆ ಆಗಾಗ್ಗೆ ಕಾಡಾನೆಗಳು ರಸ್ತೆ ಬದಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಅರಣ್ಯ ಇಲಾಖೆ ಇನ್ನಾದರೂ ಇತ್ತ ಗಮನಹರಿಸಿ ಕಾಡಾನೆಗಳು ರಸ್ತೆಗೆ ಆಗಮಿಸದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net