ಮನೆಯಂಗಳಕ್ಕೆ ಬಂದ ಕಾಡಾನೆ

18-npk -1
Published on

ನಾಪೋಕ್ಲು: ಇಲ್ಲಿಗೆ ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಯೊಂದು ಬುಧವಾರ ನಸುಕಿನಲ್ಲಿ ಮನೆಯಂಗಳಕ್ಕೆ ಧಾವಿಸಿ ದಾಂಧಲೆ ಮಾಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿಯ ಮರಂದೋಡ ಗ್ರಾಮದ ನಿವಾಸಿ ಮುಕ್ತರ್ ಅಹಮದ್ ಎಂಬುವರ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿತ್ತು. ಕಾಫಿ, ಬಾಳೆ ಸೇರಿದಂತ ಇತರ ಫಸಲನ್ನು ಹಾನಿ ಮಾಡಿತ್ತು. ಫಸಲು ಭರಿತ ತೆಂಗಿನ ಮರವನ್ನು ಬೀಳಿಸಿ ನಷ್ಟವನ್ನುಂಟು ಮಾಡಿದೆ. ಇದರಿಂದಾಗಿ ವಿದ್ಯುತ್ ತಂತಿಗಳು ತುಂಡಾಗಿ ವಿದ್ಯುತ್ ಸ್ಥಗಿತಗೊಂಡಿದೆ. ಮನೆಯಂಗಳಕ್ಕೆ ಬಂದಿರುವ ಕಾಡಾನೆಯ ಚಲನವಲನಗಳ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net