ಕೋಳಿ ಸಾಕುವ ವಿಚಾರಕ್ಕೆ ಪತಿ ಜತೆ ಕೋಪದಲ್ಲಿ ನೇಣಿಗೆ ಶರಣಾದ ಪತ್ನಿ

Bhavya Bhandari
ಭವ್ಯಾ ಭಂಡಾರಿ
Published on

ಕಾರ್ಕಳ: ಬಜಗೋಳಿ ಸಮೀಪ ಮುಟ್ರಾಲ್ ದೇವಸ್ಥಾನದ ಬಳಿ ನಿವಾಸಿ ಭವ್ಯಾ ಭಂಡಾರಿ(31) ಎಂಬುವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ರಾತ್ರಿ ಪತಿಯೊಂದಿಗೆ ಕೋಳಿ ಸಾಕುವ ವಿಚಾರದಲ್ಲಿ ಕೋಪ ಮಾಡಿಕೊಂಡು ಅದೇ ಕೋಪದಿಂದ ಮನೆಯ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net