ಪತ್ನಿ ಸತ್ತ ಮರುದಿನವೇ ಗಂಡ ದುರಂತ ಅಂತ್ಯ: ಪೊಲೀಸರಿಂದ ತಪ್ಪಿಸಿಕೊಂಡು ಓಡಿದರೂ ಜವರಾಯ ಬಿಡಲೇ ಇಲ್ಲ

New Project (6)
Published on

ಬೆಂಗಳೂರು: ಪತ್ನಿ ಆತ್ಮಹತ್ಯೆ ಕೇಸ್​ನಲ್ಲಿ ಬಂಧನಕ್ಕೊಳಪಟ್ಟಿದ್ದ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತದಲ್ಲಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಗರದಲ್ಲಿ ಸಂಭವಿಸಿದೆ.

ಕೆ.ಆರ್. ಪುರಂ ಸಂಚಾರಿ ಪೊಲೀಸ್​ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಸಂಗೀತಾ ಎಂಬಾಕೆ ಡೆತ್​ನೋಟ್​ ಬರೆದಿಟ್ಟು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣದಲ್ಲಿ ಸಂಗೀತಾಳ ಗಂಡ ಶಕ್ತಿವೇಲು ಎಂಬಾತನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದರು. ಇಂದು ಮುಂಜಾನೆ ಶೌಚಗೃಹಕ್ಕೆ ಹೋಗಬೇಕು ಎಂದಿದ್ದರಿಂದ ಆರೋಪಿಯನ್ನು ಲಾಕಪ್​ನಿಂದ ಪೊಲೀಸರು ಶೌಚಗೃಹಕ್ಕೆ ಕರೆದೊಯ್ದಿದ್ದರು. ಈ ವೇಳೆ ಆರೋಪಿ ಎಸ್ಕೇಪ್​ ಆಗಿದ್ದ. ಈತನನ್ನು ಪೊಲೀಸರು ಹಿಂಬಾಲಿಕೊಂಡು ಹೋಗಿದ್ದರು.

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಶಕ್ತಿವೇಲು, ಮಾರ್ಗಮಧ್ಯೆ ಅಂದರೆ ಟಿನ್ ಫ್ಯಾಕ್ಟರಿ ಬ್ರಿಡ್ಜ್ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net